ಶಿರಸಿ: ತಾಲೂಕಿನ ಬಕ್ಕಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಸಹಯೋಗದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಜರುಗಿತು. ಎಸ್.ಡಿ.ಎಂ.ಸಿ.ಅಧ್ಯಕ್ಷ ಗಣೇಶ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಹುಲೇಕಲ್ ಗ್ರಾ.ಪಂ.ಉಪಾಧ್ಯಕ್ಷ ಪ್ರಕಾಶ್ ಹೆಗಡೆ ತೋಟದಮನೆ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪೋಷಣೆ,ಪೋಷಕ ಆಹಾರದ ಮಹತ್ವವನ್ನು ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಆಹಾರದಲ್ಲಿನ ಪೋಷಕಾಂಶಗಳ ಅರಿವು ಮೂಡಿಸುವ ಸಲುವಾಗಿ ಆಹಾರಧಾನ್ಯಗಳನ್ನು ಬಳಸಿ ಚಿತ್ತಾರ ಮಾಡುವ ಸ್ಪರ್ಧೆ ಮತ್ತು ಪಾಲಕರಿಗಾಗಿ ಪೌಷ್ಟಿಕ ಆಹಾರ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಶಾಲಾ ಶಿಕ್ಷಕರು ವಿದ್ಯಾರ್ಥಿಗಳು,ಅಂಗನವಾಡಿ ಸಿಬ್ಬಂದಿ,ಸ್ತ್ರೀ ಶಕ್ತಿ ಸಂಘ,ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು,
ಪಾಲಕ ಪೋಷಕರು, ಬಿಸಿಯೂಟ ಸಿಬ್ಬಂದಿಗಳು, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಲಲಿತಾ ಭಟ್ ಸ್ವಾಗತಿಸಿದರೆ,ಸಹ ಶಿಕ್ಷಕಿ ಶ್ರೀಮತಿ ಶೋಭಾ ನಾಯಕ್ ವಂದಿಸಿದರು.ಶ್ರೀಮತಿ ಜಯಲಕ್ಷ್ಮಿ ನಾಯಕ್ ನಿರೂಪಿಸಿದರು