ಯಲ್ಲಾಪುರ: ಮಗುವಿನ ಪೋಷಣೆಯ ಜವಾಬ್ದಾರಿ ವಹಿಸುವ ತಾಯಂದಿರ ಕಾಳಜಿಯೇ, ಮಗುವನ್ನು ಸದೃಢವಾಗಿ ಬೆಳೆಸುತ್ತದೆ ಎಂದು ಭಾರತ ಸೇವಾದಳದ ತಾಲೂಕು ಸಂಘಟಕ ಸಂಜೀವಕುಮಾರ ಹೊಸ್ಕೇರಿ ಹೇಳಿದರು.
ಅವರು ತಾಲೂಕಿನ ಮದ್ನೂರ್ ಅಲ್ಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾಯಂದಿರ ಬಳಗಕ್ಕಾಗಿ ರಂಗೋಲಿ ಸ್ಪರ್ಧೆ, ಮಕ್ಕಳಿಂದ ನಡೆದ ವಿವಿಧ ಪೌಷ್ಠಿಕ ಆಹಾರಗಳ ಪ್ರದರ್ಶನ ಗಮನ ಸೆಳೆಯಿತು. ಪೊಲೀಸ್ ಇಲಾಖೆಯ ಗಿರೀಶ್ ಲಮಾಣಿ, ಸಿ.ಆರ್.ಪಿ ವಿಶ್ವನಾಥ ಮರಾಠಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಫಕೀರಪ್ಪ ಮೋತಣ್ಣನವರ್, ಉರ್ದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಹಶ್ಮತ್ ಶೇಖ್, ಉಪಾಧ್ಯಕ್ಷರಾದ ದೀಪಾ ಕಿತ್ತೂರ್ಕರ್, ಆಶಿಫ್ ಬಮ್ಮಿಗಟ್ಟಿ, ಊರ ಹಿರಿಯರಾದ ನಜಬುನ್ನೀಸಾ ಶೇಖ್, ಗ್ರಾ.ಪಂ ಸದಸ್ಯ ಹನುಮಂತ ವಾರೇಗೌಡ, ಉರ್ದು ಶಾಲೆಯ ಮುಖ್ಯಾಧ್ಯಾಪಕ ಇರ್ಫಾನ್, ಶಿಕ್ಷಕ ನಾಗರಾಜ ನಾಯ್ಕ ಮಾತನಾಡಿದರು.
ತಾಯಂದಿರ ಬಳಗದ ಸುನೀತಾ ನರವಟ್ಟಿ, ಹಸೀನ ಬಂಕಾಪುರ್, ಸುನೀತಾ ಮೋತ್ತಣ್ಣನವರ್, ದೀಪಿಕಾ ಚೌಹಾಣ್, ಸುರೇಖಾ ಶೆಟ್ಟಿ, ಸಕ್ಕೂಬಾಯಿ ಕಬ್ಬೇರ, ಆಸಿಯಾ ಸಾಬ್, ನೂರಜಹಾನ್ ಶೇಖ, ಬೀಬಿಜಾನ್ ಮುಜಾವರ್, ಅಶ್ವಿನಿ ನರವಟ್ಟಿ, ಪರ್ವೀನ್ ಬಾಣಿ, ಸರಸ್ವತಿ ಹರಿಜನ್ ಇದ್ದರು.
ಮುಖ್ಯಾಧ್ಯಾಪಕಿ ಪದ್ಮಾ ಪಟಗಾರ, ಶಿಕ್ಷಕಿ ಸವಿತಾ ನಾಯ್ಕ ನಿರ್ವಹಿಸಿದರು.