Slide
Slide
Slide
previous arrow
next arrow

ಅಕ್ರಮ ಮರಳು ಸಾಗಾಟ: ಸ್ಥಳೀಯರಿಗೆ ಉಸುಕು ಲಭ್ಯವಾಗುವಂತೆ ಮಾಡಲು ಒತ್ತಾಯ

300x250 AD

ಕಾರವಾರ: ಮರಳು ಅಕ್ರಮವಾಗಿ ಗೋವಾ ರಾಜ್ಯಕ್ಕೆ ಸಾಗಾಟವಾಗದಂತೆ ತಡೆದು, ಸ್ಥಳೀಯ ಅಭಿವೃದ್ಧಿ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಮರಳು ದೊರೆಯುವಂತೆ ಮಾಡುವಂತೆ ಒತ್ತಾಯಿ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ತಾಲೂಕಿನ ಕಾಳಿನದಿಯ ಮರಳು ತೆಗೆಯುವುದನ್ನು ನಿರ್ಬಂಧಿಸಿದ್ದರಿಂದ ಕಾಮಗಾರಿಗೆ ಮರಳಿನ ಕೊರತೆ ಉಂಟಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹಾನಿಗೊಳಗಾದ ಕಟ್ಟಡಗಳ ತುರ್ತು ನಿರ್ಮಾಣ ಹಾಗೂ ಸಣ್ಣಪುಟ್ಟ ಇತರೆ ಕಾಮಗಾರಿಗಳಿಗೆ ಬಡ ಜನರಿಗೆ ಉಸುಕಿನ ಕೊರತೆ ಅನುಭವಿಸುವಂತಾಗಿದೆ. ಸರಕಾರ ಉಸುಕಿನ ಬದಲು ಪರ್ಯಾಯ ವ್ಯವಸ್ಥೆ ಮಾಡದೆ ಇರುವುದರಿಂದ ಇನ್ನಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಉಸುಕು ಗಣಿಗಾರಿಕೆ ಪರವಾನಗಿ ನೀಡಿದ್ದಾಗ ಕೆಲ ಬಂಡವಾಳಶಾಹಿಗಳು ಖಾಲಿ ಇರುವ ಜಾಗದಲ್ಲಿ 50ರಿಂದ 100 ಲಾರಿಯಷ್ಟು ಉಸುಕು ದಾಸ್ತಾನು ಮಾಡಿಕೊಂಡಿದ್ದಾರೆ. ಅಂತಹ ವ್ಯಕ್ತಿಗಳು ಯಾವುದೇ ಕಾಮಗಾರಿ ಇಲ್ಲದಿದ್ದರು ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡು, ಹೆಚ್ಚಿನ ದರದಲ್ಲಿ ಗೋವಾಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ಎಂದು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಹಲವಾರು ತಿಂಗಳಿಂದ ಮರಳು ನಮ್ಮ ಗಡಿ ಮಾಜಾಳಿಯ ಚೆಕ್ ಪೋಸ್ಟ್ ಮುಖಾಂತರ ರಾಜಾರೋಶವಾಗಿ ಗೋವಾಕ್ಕೆ ಸಾಗಾಟವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಗೋವಾದಿಂದ ಕಾರವಾರಕ್ಕೆ ಬರುವ ಕಂಟೇನರ್‌ಗಳು, ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿವೆ ಎಂಬ ಮಾಹಿತಿ ಇದೆ. ಆದ್ದರಿಂದ ಖಾಲಿ ಜಾಗಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಟ್ಟ ಮರಳನ್ನು ಯಾವ ಉದ್ದೇಶಕ್ಕಾಗಿ ಇಡಲಾಗಿದೆ ಎಂಬುದರ ದಾಖಲೆ ಪರಿಶೀಲಿಸಿ, ಅವಶ್ಯಕತೆಗಿಂತ ಹೆಚ್ಚಿನ ಮರಳಿದ್ದರೆ ಅದನ್ನು ಜಪ್ತಿಪಡಿಸಿಕೊಳ್ಳಬೇಕು. ಅಲ್ಲದೇ ಸಂಬಂಧಪಟ್ಟ ಇಲಾಖೆ ಅಥವಾ ನಿರ್ಮಿತಿ ಕೇಂದ್ರದ ಮೂಲಕ ಬಡಜನರಿಗೆ ನಿರ್ಮಾಣ ಕಾಮಗಾರಿಗಳಿಗೆ ಬಳಕೆ ಮಾಡಲು ಜಪ್ತಿಪಡಿಸಿದ ಮರಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

300x250 AD

ಅಲ್ಲದೇ ಮಾಜಾಳಿಯ ಗಡಿ ಚೆಕ್‌ಪೋಸ್ಟ್ನ ಸಿಸಿಟಿವಿ ಕ್ಯಾಮೆರಾಗಳನ್ನ ಪರಿಶೀಲಿಸಿ, ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಗೋವಾದಿಂದ ಕಾರವಾರಕ್ಕೆ ಬರುವ ಅನುಮಾನಾಸ್ಪದ ವಾಹನಗಳ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ಪ್ರಮುಖರಾದ ಸುನೀಲ ನಾಯ್ಕ, ನಾಗೇಂದ್ರ ಅಂಚೇಕರ, ಮಂಗೇಶ ನಾಯ್ಕ, ಮದನ ಗುನಗಿ, ದೀಪಕ ಲಾಂಜೇಕರ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top