Slide
Slide
Slide
previous arrow
next arrow

ಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

300x250 AD

ಅಂಕೋಲಾ: ಕರೋನಾ ಮಹಾಮಾರಿಯಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಮಕ್ಕಳ ಪ್ರತಿಭೆಗಳ ಹೂರಣ ಪ್ರತಿಭಾ ಕಾರಂಜಿ ಕಲ್ಲೇಶ್ವರದ ಕೇಂದ್ರ ಶಾಲೆಯಲ್ಲಿ ಜರುಗಿತು.
ಡೋಂಗ್ರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡೋಂಗ್ರಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲತಾ ನಾಯ್ಕ, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇದು ಅತ್ಯುತ್ತಮ ವೇದಿಕೆ ಎಂದು ಹೇಳಿದರು.
ಪಂಚಾಯತ್ ಉಪಾಧ್ಯಕ್ಷ ವಿನೋದ ಭಟ್ ಮಾತನಾಡಿ ಮಕ್ಕಳ ಪ್ರತಿಭೆಗೆ ಸೂಕ್ತವಾದ ನಿರ್ಣಯವನ್ನು ನೀಡಿವುದರ ಮುಖಾಂತರ ಸೂಕ್ತವಾದ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಎಂದು ಹೇಳಿದರು.
ಜಿಲ್ಲಾ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ ಗಾಂವ್ಕರ್ ಅವರು ಮಾತನಾಡಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವುದರ ಕಡೆ ಹೆಚ್ಚಿನ ಗಮನ ಕೊಡಿ ಅಂತ ವಿದ್ಯಾರ್ಥಿಗಳಿಗೆ ತಿಳಿಮಾತು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾರಾಯಣ ಹೆಗಡೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕವಾಗಿಯೂ ಬೆಳಯಬೇಕು. ನಮ್ಮ ದೇಶವು ವಿಶೇಷವಾದ ಸಾಂಸ್ಕೃತಿಕ ಪರಂಪರೆಯಿಂದಲೇ ವಿಶ್ವದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ ಅಂತ ಹೇಳಿದರು.
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ನಾರಾಯಣ ಭಟ್ಟ, ಮೋಹನ್ ಪಟಗಾರ, ಮಾಜಿ ಅಧ್ಯಕ್ಷರಾದ ವಿ ಎಸ್ ಭಟ್ಟ, ಎಮ್ ಎನ್ ಭಟ್ಟ, ಬಿ ಆರ್ ಪಿ ಮಂಜುನಾಥ ನಾಯ್ಕ, ಸಿ ಆರ್ ಪಿ ಶ್ರೀನಿವಾಸ ನಾಯ್ಕ, ವಿನಾಯಕ ನಾಯ್ಕ, ಕಲ್ಪತರು ಸಂಘದ ಅಧ್ಯಕ್ಷ ಶ್ರೀಕೃಷ್ಣ ಗುಡ್ಡೆ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಪಾರ್ವತಿ ನಾಯ್ಕ, ಗೋಪಾಲಕೃಷ್ಣ ವೈದ್ಯ, ಶೇಖರ್ ಗಾಂವ್ಕರ್, ಪ್ರಭಾಕರ ಕೋಟೆಮನೆ, ಗಣಪತಿ ಹೆಗಡೆ, ರಾಘು ಹೆಗಡೆ, ಗೋವಿಂದ ಪಟಗಾರ, ರಾಮಚಂದ್ರ ಪಟಗಾರ, ದಿನಕರ ಗೌಡ, ಬೀರ ಗೌಡ, ಶ್ರೀಮತಿ ಲಲಿತಾ ಕೂರ್ಸೆ ಉಪಸ್ಥಿತರಿದ್ದರು.
ಡೋಂಗ್ರಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಹುಮಾನಗಳ ಜೊತೆಗೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ರೂಪದಲ್ಲಿ ಪುಸ್ತಕ ‌ನೀಡಿದ್ದು ಹಾಗೂ ಈ ಸಮಯದಲ್ಲಿ ಆಗಮಿಸಿ, ನಿಷ್ಪಕ್ಷಪಾತಿಯ ನಿರ್ಣಯವನ್ನು ನೀಡಿದ ಎಲ್ಲ ನಿರ್ಣಾಯಕರನ್ನು ಸಮಿತಿಯ ಪರವಾಗಿ ಶಾಲು ಹೊದೆಸಿ ಗೌರವಿಸಿದ್ದು ವಿಶೇಷವಾಗಿತ್ತು
ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಿಗೂ ಅತ್ಯುತ್ತಮವಾದ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನೂ ಸಮೂಹ ಸಂಪನ್ಮೂಲ ವ್ಯಕ್ತ ಕೆ.ಎಮ್.ಗೌಡ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ಶೇಖ್ ನಿರೂಪಿಸಿದರು. ಶ್ರೀಮತಿ ಅಕ್ಷಯಾ ಗುನಗಾ ವಂದಿಸಿದರು.

300x250 AD

ಈ ಪ್ರತಿಭಾ ಕಾರಂಜಿ, ಮುಖ್ಯೋದ್ಯಾಪಕರು ಹಾಗೂ ಶಿಕ್ಷಕ ಬಳಗ ,ಎಸ್ ಡಿ ಎಂ ಸಿ ಯ ಸದಸ್ಯರುಗಳು, ಪ್ರೌಢಶಾಲಾ ಶಿಕ್ಷಕರ ಬಳಗ, ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಿಕ್ಷಕರು, , ಗೋಪಾಲಕೃಷ್ಣ ಯುವಕ ಮಂಡಳ ಮತ್ತು ಶಾರದಾಂಬಾ ಯುವತಿ ಮಂಡಳ ಕಲ್ಲೇಶ್ವರ, ಪಾಲಕ ಪೋಷಕರು, ವಿದ್ಯಾರ್ಥಿ ಸಮುದಾಯ, ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ್ದು ಇದರ ಯಶಸ್ವಿಗೆ ಕಾರಣವಾಯಿತು.ವಿಜೇತರಿಗೆ ಅಭಿನಂದನೆಗಳು::ನಾರಾಯಣ ಹೆಗಡೆ, ಅಧ್ಯಕ್ಷರು ಎಸಡಿಎಂಸಿ ಅಧ್ಯಕ್ಷರು ಕಲ್ಲೇಶ್ವರ

Share This
300x250 AD
300x250 AD
300x250 AD
Back to top