ಭಟ್ಕಳ: ಬೆಂಕಿ ಅವಘಡದಿಂದ ಹಾನಿಯಾಗಿದ್ದ ಭಟ್ಕಳ ನ್ಯಾಯಾಲಯ ಸಂಕೀರ್ಣದ ನೂತನ ಕಟ್ಟಡ ನಿರ್ಮಾಣಕ್ಕೆ ಮತ್ತು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರಂಭಿಸುವ ಬಗ್ಗೆ ಭಟ್ಕಳ ವಕೀಲರ ಸಂಘದ ನಿಯೋಗವು ಹೈಕೋರ್ಟ್ ನ್ಯಾಯಾಧೀಶರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಶಾಸಕ ಸುನೀಲ ನಾಯ್ಕ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಅವರ ನೇತ್ರತ್ವದಲ್ಲಿ ನಿಯೋಗದೊಂದಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ, ಕಾನೂನು ಸಚಿವ ಮಾಧುಸ್ವಾಮಿ, ಸಿ.ಸಿ.ಪಾಟೀಲ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಹೈಕೋರ್ಟ್ ಒಪ್ಪಿಗೆ- ಪ್ರಸ್ತಾವನೆ ಬಂದ ತಕ್ಷಣ ಕೂಡಲೇ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ವಕೀಲ ಸಂಘದ ಅಧ್ಯಕ್ಷ ಪಾಂಡು ಜಿ.ನಾಯ್ಕ, ಉಪಾಧ್ಯಕ್ಷ ಎಮ್.ಜೆ.ನಾಯ್ಕ, ಕಾರ್ಯದರ್ಶಿ ಈಶ್ವರ ನಾಯ್ಕ, ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಜೇಶ ನಾಯ್ಕ, ಹಿರಿಯ ವಕೀಲರುಗಳಾದ ಜೆ ಡಿ.ನಾಯ್ಕ, ಎಮ್.ಎಲ್. ನಾಯ್ಕ, ರವೀಂದ್ರ ಆರ್.ಶ್ರೇಷ್ಟಿ, ಎಸ್.ಎಮ್.ಬೊಮ್ಮಾಯಿ, ವಿ.ಜೆ.ನಾಯ್ಕ ಮುಂತಾದ ಭಟ್ಕಳದ ವಕೀಲರು ಇದ್ದರು.