• Slide
    Slide
    Slide
    previous arrow
    next arrow
  • ಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘಕ್ಕೆ 4.62 ಲಕ್ಷ ಲಾಭ

    300x250 AD

    ಯಲ್ಲಾಪುರ: ಇಲ್ಲಿನ ಯಲ್ಲಾಪುರ ಕೈಗಾರಿಕಾ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 4,62,714 ರೂ.ಗಳ ನಿವ್ವಳ ಲಾಭ ಗಳಿಸಿದೆ. ಶಿಥಿಲಾವಸ್ಥೆಗೆ ತಲುಪಿದ್ದ ಕಟ್ಟಡವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ನೀಡಿದ ಸಲಹೆಯಂತೆ ಇದೀಗ ಮರುಜೀವ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.

    ಅವರು ಸೆ.22ರಂದು ಪಟ್ಟಣದ ಅಡಿಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘದ ಕುರಿತು ವಿವರಿಸುತ್ತಿದ್ದರು. ಏಳು ವರ್ಷಗಳ ಹಿಂದೆ ಆರಂಭಗೊಂಡು, ಕಾರಣಾಂತರದಿಂದಾಗಿ ಕೆಲವು ವರ್ಷಗಳಿಂದ ಪ್ರಗತಿ ಸಾಧಿಸಲಾಗದೇ ಸಂಘ ಹಿಂದೆ ಉಳಿದಿತ್ತು. ಬಡವರೇ ಸಂಘದ ಆಸ್ತಿಯಾಗಿದ್ದು, ಕಾರ್ಮಿಕ ಸಚಿವರ ಸ್ವಯಂ ಆಸಕ್ತಿಯ ಹಿನ್ನೆಲೆಯಲ್ಲಿ ನಮ್ಮ ಆಡಳಿತ ಮಂಡಳಿ ಸಂಘವನ್ನು ಪೂರ್ಣ ಪ್ರಮಾಣದಲ್ಲಿ ಬೆಳೆಸಿ, ಉಳಿಸುವ ಆಶಯ ಹೊಂದಿದ್ದೇವೆ. ಸಂಘವು ಗಳಿಸಿದ ಲಾಭವನ್ನೇ ನಾವು ಮಾನದಂಡವೆಂದು ಭಾವಿಸದೇ, ಸಂಘವು ಸದಸ್ಯ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿ ಎಷ್ಟೆಂಬುದನ್ನು ಪ್ರಮುಖವಾಗಿ ಯೋಚಿಸುತ್ತೇವೆ ಎಂದರು.

    ಮಾರ್ಚ್ ಅಂತ್ಯಕ್ಕೆ 820 ಶೇರು ಸದಸ್ಯರನ್ನು ಹೊಂದಿರುವ ಸಂಘವು 10,99,750 ರೂ.ಗಳ ಶೇರು ಬಂಡವಾಳ, 1,66,95,909 ರೂ.ಗಳ ಠೇವು ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 4,62,714 ರೂ.ಗಳ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷಗಳಲ್ಲಿ ಹಾನಿಯಲ್ಲಿರುವುದರಿಂದ ಲಾಭ ವಿಂಗಡಣೆ ಮಾಡದೇ ಹಿಂದಿನ ಹಾನಿಯನ್ನು ಈ ವರ್ಷದ ಲಾಭದಲ್ಲಿ ವಜಾ ಮಾಡಿ, ನಿಕ್ಕಿ ಹಾನಿ 7,03,980 ರೂ. ಎಂದು ಪರಿಗಣಿಸಿದ್ದೇವೆ ಎಂದು ವಿವರಿಸಿದರು.

    300x250 AD

    ಉಪಾಧ್ಯಕ್ಷ ಕೆ.ಟಿ.ಹೆಗಡೆ ಆನಗೋಡು, ಮುರಳಿ ಹೆಗಡೆ ಇಡಗುಂದಿ, ಶ್ರೀಪಾದ ಮೆಣಸುಮನೆ ಕೊಡಸೆ, ನಾಗೇಂದ್ರ ಭಟ್ಟ ಬಾಳಗಿಮನೆ. ಜಯರಾಮ ಹೆಗಡೆ ಹೊನಗದ್ದೆ, ರಾಧಾ ಹೆಗಡೆ ಉಮ್ಮಚಗಿ, ಸಂತೋಷ ನಾಯ್ಕ ಕೊಳಿಕೆರೆ, ರಶೀದ್ ಅಬ್ದುಲ್ ಅಲ್ಕೇರಿ, ವಿಶೇಷ ಆಮಂತ್ರಿತರಾದ ಪಿ.ಜಿ.ಹೆಗಡೆ ಕಳಚೆ, ಪಿ.ಜಿ.ಭಟ್ಟ ವಡ್ರಮನೆ, ಮುಖ್ಯ ಕಾರ್ಯನಿರ್ವಾಹಕ ರವೀಂದ್ರ ದೇಸಾಯಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top