Slide
Slide
Slide
previous arrow
next arrow

ಗಾಂಧಿನಗರ ಕೊಳಚೆ ಪ್ರದೇಶವೆಂಬ ಘೋಷಣೆ ಹಿಂಪಡೆಯಲು ಮನವಿ

300x250 AD

ಮುಂಡಗೋಡ: ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣ ಹೊಡೆಯುವ ಕುತಂತ್ರದಿಂದ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ತಪ್ಪು ಮಾಹಿತಿ ನೀಡಿ, ಪಟ್ಟಣದ ಗಾಂಧಿನಗರ ಬಡಾವಣೆ ಕೊಳಚೆ ಪ್ರದೇಶವಲ್ಲದಿದ್ದರೂ ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಇಲ್ಲಿಯ ನಿವಾಸಿಗಳಿಗೆ ಅನ್ಯಾಯವಾಗುತ್ತದೆ. ತಕ್ಷಣ ಕೊಳಚೆ ಪ್ರದೇಶ ಎಂಬ ಘೋಷಣೆ ಹಿಂಪಡೆದು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ಗಾಂಧಿನಗರ ನಿವಾಸಿಗಳು ಗುರುವಾರ ತಹಸೀಲ್ದಾರ ಶಂಕರ ಗೌಡಿ ಅವರಿಗೆ ಮನವಿ ಸಲ್ಲಿದರು.

ಪಟ್ಟಣದ ಗಾಂಧಿನಗರ ಬಡಾವಣೆಯ ಸರ್ವೇ ನಂ 186 ರಲ್ಲಿ 530 ಕುಟುಂಬ ವಾಸವಾಗಿದ್ದು, ಅದರಲ್ಲಿ 253 ಕುಟುಂಬಗಳಿಗೆ 1979-80 ರಲ್ಲಿ ತಲಾ ಒಂದು ಕುಟುಂಬಕ್ಕೆ 116.25 ರೂಪಾಯಿ ಹಣವನ್ನು ಭರಿಸಿಕೊಂಡು ಆಗಿನ ಟೌನ್ ಪಂಚಾಯತ್ ನವರು 40/60 ಚದರ ಅಡಿ ಪ್ಲಾಟ್ ಮಂಜೂರಿ ಮಾಡಿದ್ದಾರೆ. ಈ ಪ್ರದೇಶದಲ್ಲಿ 43 ವರ್ಷಗಳಿಂದ 253 ಕುಟುಂಭಗಳು ವಾಸ ಮಾಡುತ್ತ ಬಂದಿದ್ದಾರೆ. ಆದರೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು 20 ವರ್ಷಗಳಿಂದ ಇಲ್ಲಿ ವಾಸವಿದ್ದಾರೆಂದು ಸುಳ್ಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಗಾಂಧಿನಗರದಲ್ಲಿ 253 ಕುಟುಂಬಗಳು ವಾಸಿಸುವ ಪ್ರದೇಶದಲ್ಲಿ 35 ವರ್ಷದಿಂದ ವಿದ್ಯುತ್ ಸಂಪರ್ಕವಿದೆ. ಗಾಂಧಿನಗರ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ, ಚರಂಡಿ ಸೇರಿದಂತೆ ಎಲ್ಲ ವ್ಯವಸ್ಥೆ ಇದೆ. 253 ಮನೆಗಳಿರುವ ಪ್ರದೇಶ ಯಾವುದೇ ರೀತಿ ಕೊಳಗೇರಿ ವಾತಾವರಣದಿಂದ ಕೂಡಿರುವುದಿಲ್ಲ. ಪ.ಪಂ ಮುಖ್ಯಾಧಿಕಾರಿಗಳು ಈ ಬಗ್ಗೆ ಸಂಪೂರ್ಣ ತಪ್ಪು ಮಾಹಿತಿ ನೀಡಿದ್ದಾರೆ. ಗಾಂಧಿನಗರ ಕೊಳಗೇರಿ ಪ್ರದೇಶವೆಂದು ಘೋಷಿಸುತ್ತೇವೆಂದು ಪ.ಪಂ ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುರಾಸೆಯಿಂದ ಈ ಪ್ರದೇಶವನ್ನು ಕೊಳಗೇರಿ ಪ್ರದೇಶವೆಂದು ಸಾಬೀತು ಮಾಡಿದ್ದಾರೆ.

42 ವರ್ಷಗಳಿಂದ ಉತಾರ ಹಾಗೂ ನಮೂನೆ 3 ರಲ್ಲಿ 4060 ನಿವೇಶನ ಹೊಂದಿದ ನಮಗೆ 3040 ನಿವೇಶನಕ್ಕೆ ವರ್ಗಾವಣೆ ಮಾಡಿಕೊಳ್ಳಿ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ತೆರಿಗೆ ಕಟ್ಟಿದರೂ ಉತಾರ ನೀಡದೆ ತೊಂದರೆ ನೀಡುತ್ತಿದ್ದಾರೆ 42 ವರ್ಷಗಳಿಂದ ಉತಾರ ಹಾಗೂ ನಂ 3 ರಲ್ಲಿ ಎಷ್ಟು ಅಳತೆ ಇತ್ತು ಅದೇ ಅಳತೆಯಂತೆ ನಮಗೆ ಉತಾರ ಹಾಗೂ ನಮೂನೆ 3 ಫಾರಂ ನೀಡಲು ಆದೇಶಿಸಬೇಕು. ಅಲ್ಲದೇ ತಾವುಗಳು ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರ ಸಮಕ್ಷಮದಲ್ಲಿ ಸ್ಥಳ ಪರಿಶೀಲಿಸಿ ಕೊಳಚೆ ಪ್ರದೇಶ ಎಂಬ ಘೋಷಣೆಯನ್ನು ಹಿಂಪಡೆದು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

300x250 AD

ಈ ವೇಳೆ ಎನ್.ಡಿ ಕಿತ್ತೂರ, ವೆಂಕಟೇಶ ಶಿರಾಲಿ, ಶ್ರೀಮಂತಪ್ಪ ಎಸ್.ಜಿ ಉಗ್ರಾಣ, ರಾಕೇಶ ರಾಯ್ಕರ, ನಾರಾಯಣ ಕುರ್ಡೇಕರ, ಪಿ.ಡಿ ನಾಯ್ಕ, ಮಾರುತಿ ಪಾಟೀಲ, ವಿ.ಎಸ್ ವೀರಕ್ತಮಠ, ಮಾರುತಿ ಶಿಗ್ಗಾವಿ, ಸಂಗಮೇಶ ಕೋಳೂರ, ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top