Slide
Slide
Slide
previous arrow
next arrow

ಕಾಳಿ ನದಿ ತೀರದಲ್ಲಿ ತಡೆಗೋಡೆ ನಿರ್ಮಿಸುವುದಕ್ಕೆ ಸ್ಥಳೀಯರ ವಿರೋಧ

300x250 AD

ದಾಂಡೇಲಿ: ಮೊಸಳೆಗಳು ಮಾನವನ ಮೇಲೆ ದಾಳಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ನಗರದ ಅಲೈಡ್ ಪ್ರದೇಶ, ಹಳಿಯಾಳ ರಸ್ತೆಯ ಕಾಳಿ ನದಿ ತೀರದಲ್ಲಿ ನಗರ ಸಭೆಯಿಂದ ಗುರುವಾರ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ಉದಯ ನಾಯರ್, ನಗರಸಭಾ ಸದಸ್ಯೆ ಪ್ರೀತಿ ನಾಯರ್ ಅವರು ಸ್ಥಳೀಯ ಜನತೆಯೊಂದಿಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿ ತಡೆಗೋಡೆ ನಿರ್ಮಾಣ ಮಾಡದಂತೆ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಪೌರಾಯುಕ್ತರಾದ ಆರ್.ಎಸ್.ಪವಾರ್, ಪಿಎಸೈ ಕಿರಣ್ ಪಾಟೀಲ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಉದಯ ನಾಯರ್ ಅವರು ತಡೆಗೋಡೆ ನಿರ್ಮಿಸದಂತೆ ಪೌರಾಯುಕ್ತರಿಗೆ ಲಿಖಿತ ಮನವಿ ನೀಡಿದರು. ಪೌರಾಯುಕ್ತರ ಜೊತೆ ಮಾತನಾಡಿದ ಉದಯ ನಾಯರ್ ಅವರು ಇಲ್ಲಿ ತಡೆಗೋಡೆ ನಿರ್ಮಾಣ ಮಾಡುವುದರಿಂದ ಇಲ್ಲಿಯ ಜನರಿಗೆ ನದಿ ತೀರಕ್ಕೆ ಬಟ್ಟೆ ತೊಳೆಯಲಿಕ್ಕೆ ಹೋಗಲು ತೊಂದರೆಯಾಗುತ್ತದೆ. ನಮಗೆ ಕಾಳಿ ನದಿಗೆ ಹೋಗಲು ಅವಕಾಶ ನೀಡಬೇಕು. ಈ ಕಾರಣದಿಂದ ಇಲ್ಲಿ ತಡೆಗೋಡೆ ನಿರ್ಮಿಸಬಾರದೆಂದು ಮನವಿ ಮಾಡಿದರು.

300x250 AD

ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಮತ್ತು ಮೇಲಾಧಿಕಾರಿಯವರ ನಿರ್ದೇಶನದಂತೆ ಕ್ರಮವನ್ನು ಕೈಗೊಳ್ಳಲಾಗುವುದೆಂದರು. ಇದೀಗ ಸಧ್ಯಕ್ಕೆ ತಡೆಗೋಡೆ ನಿರ್ಮಾಣ ಕರ‍್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಸಂದರ್ಭದಲ್ಲಿ ನಗರ ಸಭೆಯ ಅಧಿಕಾರಿಗಳಾದ ಸುನೀತಾ ನಾಯ್ಕ, ವಿ.ಎಸ್.ಕುಲಕರ್ಣಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದರು.

Share This
300x250 AD
300x250 AD
300x250 AD
Back to top