• Slide
    Slide
    Slide
    previous arrow
    next arrow
  • ಭುವನೇಶ್ವರಿ ಸನ್ನಿಧಿಯಲ್ಲಿ ನವರಾತ್ರಿಗಾಗಿ ಸಕಲ ಸಿದ್ಧತೆ

    300x250 AD

    ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಈ ಬಾರಿ ವಿಜೃಂಭಣೆಯಿಂದ ನವರಾತ್ರಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ದಿನ ಸಂಕಲ್ಪ, ಪೂಜೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಸಪ್ತಶತಿ ಪಾರಾಯಣ ನಡೆಯಲಿದ್ದು, ಸಂಜೆ ವಿಶೇಷ ಅಲಂಕಾರದೊಂದಿಗೆ ಮಹಾಪೂಜೆ ಜರುಗಲಿದೆ. ಭಕ್ತರು ದೇವರ ಸೇವೆಯಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ನವರಾತ್ರಿಯ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕುಂಕುಮರ್ಚನೆ ದೇವಾಲಯದ ಆವರದಲ್ಲಿ ನಡೆಯಲಿದೆ. ಎಲ್ಲಾ ವರ್ಗದ ಸುಮಂಗಲೆಯರು ಮತ್ತು ಸುಹಾಸಿನಿಯರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಕೊನೆಯ ದಿನವಾದ ವಿಜಯ ದಶಮಿಯಂದು ಬನ್ನೀ ಪೂಜೆ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಲಿದೆ ಎಂದರು.

    ಆಡಳಿತ ಮಂಡಳಿಯ ಸದಸ್ಯ ಗಣಪತಿ ಹೆಗಡೆ ಮಾತನಾಡಿ ಭುವನೇಶ್ವರಿ ದೇವಾಲಯ ಮತ್ತು ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ನವರಾತ್ರಿ ಉತ್ಸವದ 9 ದಿನವೂ ದೇವಾಲಯದ ಆವರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶಿರಸಿಯ ಸುನೀತಾ ಭಟ್ಟ, ವಸುಧಾ ಹೆಗಡೆ, ಚೇತನಾ ಹೆಗಡೆ ಮತ್ತು ಸಂಗಡಿಗರು, ಯಲ್ಲಾಪುರದ ವಾಣಿ ರಮೇಶ ಹೆಗಡೆ, ಕಲ್ಕತ್ತಾದ ತೇಜಸ್ವಿನಿ ವರ್ಣೇಕರ್ , ಯಡಳ್ಳಿಯ ವಿ. ಪ್ರಕಾಶ ಹೆಗಡೆ ಮತ್ತು ಶಿರಸಿರ ಮಧುಶ್ರೀ ಶೇಟ್ ಇವುರುಗಳಿಂದ ಸುಗಮ ಮತ್ತು ಶಾಸ್ತ್ರೀಯ ಸಂಗೀತ, ಭುವನೇಶ್ವರಿ ತಾಳಮದ್ದಲೆ ಕೂಟದವರಿಂದ ತಾಳಮದ್ದಲೆ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವಿನಂತಿಸಿದರು.

    300x250 AD

    ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಚಂದ್ರಕಾಂತ ಹೆಗಡೆ, ಸದಸ್ಯರಾದ ವಿ.ಎಸ್.ಹೆಗಡೆ ಸಾತನಕೇರಿ, ಸುಬ್ರಾಯ ಹೆಗಡೆ ಮದ್ದಿನಕೇರಿ, ವಿ.ಶೇಷಗಿರಿ ಭಟ್ಟ ಗುಂಜಗೋಡು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top