ಶಿರಸಿ: ಭಾರತ ಸೇವಾದಳ ರಾಜ್ಯಾಧ್ಯಕ್ಷ ಶಂಕರ ಮುಗದರವರು ಪ್ರಥಮ ಬಾರಿಗೆ ಶಿರಸಿಯ ಭಾರತ ಸೇವಾದಳ ಜಿಲ್ಲಾ ಕಛೇರಿಗೆ ಸೆ.22 ರಂದು ಭೇಟಿ ನೀಡಿದರು. ಜಿಲ್ಲಾಧ್ಯಕ್ಷ ವಿ.ಎಸ್.ನಾಯಕರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿಯ ಜೊತೆ ರಾಜ್ಯಾಧ್ಯಕ್ಷರು ಸೇವಾದಳದ ಅಭಿವೃದ್ಧಿಯ ಕುರಿತು ವಿಚಾರ ವಿನಿಮಯಗಳನ್ನು ನಡೆಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಡಾ. ಕೆ.ಎನ್. ಹೊಸ್ಮನಿ, ಸದಸ್ಯರಾದ ಗಜಾನನ ಹೆಗಡೆ, ತಾಲೂಕಾ ಅಧ್ಯಕ್ಷ ಅಶೋಕ ಬಜಂತ್ರಿ, ಉಪಾಧ್ಯಕ್ಷರಾದ ಶ್ರೀಮತಿ ವೀಣಾ ಭಟ್ಟ, ಸದಸ್ಯರಾದ ಕೆ.ಎನ್. ನಾಯ್ಕ, ಸತೀಶ ಹೆಗಡೆ, ಶ್ರೀಮತಿ ಸಾವಿತ್ರಿ ಭಟ್ಟ, ಪತ್ರಕರ್ತರಾದ ಪ್ರದೀಪ ಶೆಟ್ಟಿ ಉಪಸ್ಥಿತರಿದ್ದರು. ರಾಜ್ಯಾಧ್ಯಕ್ಷ ಶಂಕರ ಮುಗದರವರಿಗೆ ಜಿಲ್ಲಾ ಸಮಿತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಸರ್ವರನ್ನು ಸ್ವಾಗತಿಸಿ ನಿರ್ವಹಿಸಿದರು. ಸದಸ್ಯ ಸುಧಾಮ ಪೈ ವಂದಿಸಿದರು.