ಯಲ್ಲಾಪುರ; ಜಿಲ್ಲೆಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಗೆ ತ್ವರಿತ ಗಮನಹರಿಸ ಬೇಕೆಂದು ಜೆಡಿಎಸ್ ತಾಲೂಕಾ ಘಟಕ ಆಗ್ರಹಿಸಿ ಗ್ರೇಡ್ 2 ತಹಶಿಲ್ದಾರ ಸಿ.ಜಿ.ನಾಯ್ಕ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ವಿಶಾಲ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿರು ಜಿಲ್ಲೆಯಲ್ಲಿ ಈವರೆಗೂ ಒಂದೂ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಇಲ್ಲದಿರುವುದು ದುರದೃಷ್ಟಕರ.ಇರುವ ಸರಕಾರಿ ಆಸ್ಪತ್ರೆಗಳಲ್ಲೂ ಸುಸಜ್ಜಿತ ವೈದ್ಯಕೀಯ ಉಪಕರಣ,ಸಿಬ್ಬಂದ್ದಿ ಕೊರತೆ ಕಾರಣ ಸಮರ್ಪಕ ಸೇವೆ ಲಭಿಸುತ್ತಿಲ್ಲ. ಪರಿಣಾಮ ಜನಸಾಮಾನ್ಯರು ಅನುಭವಿಸುವ ಗೋಳು ಕೇಳುವವರಿಲ್ಲ. ಹಲವು ದಕಗಳಿಂದ ಪ್ರಭಾವಿ ಜನಪ್ರತಿನಿಧಿಗಳಿದ್ದರೂ,ಇಚ್ಚಾಶಕ್ತಿಯ ಕೊರತೆ ಕಾರಣದಿಂದ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೇ ಜನ ಬೇಸತ್ತಿದ್ದಾರೆ.ಜಿಲ್ಲೆಯಾಧ್ಯಂತ ಜನ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಪಟ್ಟುಹಿಡಿದಿದ್ದಾರೆ.ಸರಕಾರ ಮಧ್ಯಪ್ರವೇಶಿಸಿ ಜನರ ಬಹುಕಾಲದ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಜೆಡಿ ಎಸ್ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ನಾಗೇಶ ನಾಯ್ಕ ಕಾಗಾಲ,ತಾಲೂಕಾ ಅಧ್ಯಕ್ಷ ಬೆನಿತ್ ಸಿದ್ದಿ,ಜಿಲ್ಲಾ ಸದಸ್ಯ ಸೋಮೇಶ್ವರ ಗೌಡ,ಪ್ರಮುಖರಾದ ಜಾನ್ ಸಿದ್ದಿ,ಹರೂಣ ಶೇಖ್ ಕಿರವತ್ತಿ, ಶಂಕರ ಸಿದ್ದಿ,ದಾಮು ನಾಯ್ಕ ಮಂಚಿಕೇರಿ ಮುಂತಾದವರು ಇದ್ದರು.