ಶಿರಸಿ: ಬಿಜೆಪಿಯ ರೈತ ವಿರೋಧಿ ನೀತಿಯಿಂದ ಮತ್ತು ಅಪ್ರಬುದ್ಧ ಆಡಳಿತದಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಹೇಳಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮತನಾಡಿದ ಅವರು, ಬಿಜೆಪಿಯ ಬೇಜವಾಬ್ದಾರಿ ಆಡಳಿತದಿಂದಾಗಿ ರೈತ ಸಮುದಾಯ ಸಾಕಷ್ಟು ಕಷ್ಟ ಅನುಭವಿಸುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ತುಂಬಾ ಹೆಚ್ಚಳವಾಗಿದೆ, ಪೆಟ್ರೋಲ್ ಡಿಸೆಲ್ ಬೆಲೆ ದಿನ ನಿತ್ಯ ಏರುತ್ತಿದ್ದು ಅವಶ್ಯಕ ಸಾಮಗ್ರಿಗಳ ಸಾಗಾಟವೂ ಕಷ್ಟದಾಯಕವಾಗಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ, ನಿರುದ್ಯೋಗ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಯಾವುದೇ ಜನಪರ ಯೋಜನೆಗಳನ್ನು ನೀಡದ ಬಿಜೆಪಿ ಸರ್ಕಾರಗಳು ಕೇವಲ ಧರ್ಮ ಜಾತಿಗಳ ವಿಭಜನೆಯಿಂದ ಮತಗಳಿಸಲು ಯತ್ನಿಸುತ್ತಿದೆ ಎಂದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಂಘಟನೆಯನ್ನು ಬಲಗೊಳಿಸಲು ತೀರ್ಮಾನಿಸಿದ್ದು, ಬ್ಲಾಕ್ ಘಟಕ ಸಮಿತಿಗಳನ್ನು ರಚಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ ಮತ್ತು ಬೂತ್ ಸಮಿತಿಗಳನ್ನು ರಚಿಸಿ ಬರಲಿರುವ ಚುನಾವಣೆಗೆ ಕಿಸಾನ್ ಘಟಕವನ್ನು ಸನ್ನದ್ದಸ್ಥಿತಿಯಲ್ಲಿ ಇರಿಸಲಾಗುವುದೆಂದು ತಿಳಿಸಿದರು. ಪ್ರತಿ ಬ್ಲಾಕ್ ಕಿಸಾನ್ ಘಟಕಗಳಿಗೆ ಜಿಲ್ಲಾ ಸಮಿತಿಯಿಂದ ವೀಕ್ಷಕರುಗಳನ್ನು ನೇಮಿಸಲಾಗುತ್ತಿದೆ ಎಂದರು.
ರಾಜ್ಯ ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಪಾದ್ ಹೆಗಡೆ ಕಡವೆ ಮಾತನಾಡಿ, ರೈತರಲ್ಲಿ ತ್ಯಾಗ ಮನೋಭಾವನೆ ಇದೆ ರೈತರು ಎದ್ದು ನಿಂತರೆ ಕ್ರಾಂತಿಯೇ ಆಗುತ್ತದೆ. ಅದಕ್ಕಾಗಿ ಬಿಜೆಪಿ ರೈತರ ಬಲ ಕುಂದಿಸಲು ಹೊರಟಿದೆ ಆದ್ದರಿಂದ ಹಿರಿಯ ಕ್ರಿಯಾಶೀಲ ರೈತರುಗಳನ್ನು ಕಿಸಾನ್ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಕು ಎಂದರು. ರೈತರಿಗೆ ಕಿಸಾನ್ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತದೆ ಎಂದರು. ಕಿಸಾನ್ ಘಟಕಗಳಲ್ಲಿ ಸಂಖ್ಯೆಯೊಙದಿಗೆ ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು ಎಂದರು.
ಭಟ್ಕಳ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಎನ್.ಜೆ.ನಾಯ್ಕ, ಮುಂಡಗೋಡ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಪ್ರದೀಪ್ ಗೌಡ, ಮಂಕಿ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಿಲ್ಲಾ ಕಿಸಾನ್ ಉಪಾಧ್ಯಕ್ಷ ಮನೋಹರ ಗೌಡ ಮಾತನಾಡಿದರು.
ಸಭೆಯಲ್ಲಿ ಕಿಸಾನ್ ಬ್ಲಾಕ್ ಅಧ್ಯಕ್ಷರುಗಳಾದ ಪಾಂಡುರಂಗ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ಕರ್ಕಿ, ಶ್ರೀಧರ ಹೆಗಡೆ ಶಿರಸಿ, ಗಿರೀಶ ಪಟಗಾರ ಹೆಗಡೆ, ಗಜಾನನ ನಾಯ್ಕ ಸಾಲ್ಕೋಡ್, ನಾಗೇಶ ನಾಯ್ಕ ಅರೆಅಂಗಡಿ, ರಾಮಕೃಷ್ಣ ಶೆಟ್ಟಿ ಕೆರೆಕೋಣ, ಗಜಾನನ ಮೊರಬಾ, ಸುರೇಶ ಮೇಸ್ತ ಕರ್ಕಿ, ಕೆ.ಜೆ.ನಾಯ್ಕ ಭಟ್ಕಳ, ಹರೀಶ ಭಟ್ಟ ಕಲ್ಲಬ್ಬೆ, ನವೀನ್ ನಾಯ್ಕ ಹಳೀದಿಪುರ, ಶಂಶೀರ್‌ಖಾನ್ ಹಳದೀಪುರ, ವಾಮನ್ ಪಟಗಾರ ಬರ್ಗಿ, ಬಾಬು ನಾಯ್ಕ ಬಳಕೂರು ಮತ್ತಿತರರು ಹಾಜರಿದ್ದರು.