Slide
Slide
Slide
previous arrow
next arrow

ಶ್ರೀಮಾತಾ ವಿಎಸ್ಸೆಸ್ಸ್’ಗೆ 41.68 ಲಕ್ಷ ರೂ.ಗೂ ಮಿಕ್ಕಿ ಲಾಭ

300x250 AD

ಯಲ್ಲಾಪುರ: ತಾಲೂಕಿನ ಹಿರೇಸರ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ 18 ವರ್ಷಗಳನ್ನು ಪೂರೈಸಿ, 19ನೇ ವರ್ಷದ ಪೂರ್ವಾರ್ಧದಲ್ಲಿದೆ. ಈ ಹದಿನೆಂಟು ವರ್ಷಗಳಲ್ಲಿ, ಹಲವು ತೊಂದರೆಗಳ ನಡುವೆಯೂ ತೃಪ್ತಿಕರವಾದ ಬೆಳವಣಿಗೆಯಲ್ಲಿ ಮುನ್ನಡೆಯುತ್ತಿದೆ. ಪ್ರಸ್ತುತ ವರ್ಷ 41.68 ಲಕ್ಷ ರೂ.ಗೂ ಮಿಕ್ಕಿ ಲಾಭ ಗಳಿಸಿದೆ ಎಂದು ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಭದಲ್ಲಿ 20 ಲಕ್ಷ ರೂ.ಗಳನ್ನು ವಿವಿಧ ನಿಧಿಗಳಾಗಿ ತೆಗೆದಿರಿಸಲಾಗಿದೆ. ವರ್ಷಾಂತ್ಯಕ್ಕೆ ಇದ್ದಂತೆ 18,28,90,554 ರೂ. ದುಡಿಯುವ ಬಂಡವಾಳವನ್ನು ಹೊಂದಿದ್ದು, 13,68,82,096 ರೂ.ನಷ್ಟು ಸಾಲ ನೀಡಲಾಗಿದೆ. ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 80,31,11,889 ರೂ.ನಷ್ಟು ವ್ಯವಹಾರವನ್ನು ಮಾಡಿದೆ ಎಂದು ವಾರ್ಷಿಕ ಪ್ರಗತಿಯ ಕುರಿತು ವಿವರಿಸಿದರು.

2019-2020ರ ಕೋವಿಡ್ ಕಾರಣಕ್ಕೆ ಸದಸ್ಯರು ತೀವ್ರ ಕಷ್ಟವನ್ನು ಅನುಭವಿಸಿದ್ದಾರೆ. ಕಾರಣ ಸಂಘದ ಸಾಲ ವಸೂಲಿಯಲ್ಲಿ, ತೀವ್ರ ಪರಿಣಾಮ ಬೀರಿತ್ತಾದರೂ, ಪ್ರಸ್ತುತ ಸಾಲಿನಲ್ಲಿ ಸಾಲವಸೂಲಿ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ಸಂಘಕ್ಕೆ 5330 ಕ್ಕೂ ಹೆಚ್ಚು ಸದಸ್ಯರು ವ್ಯವಹರಿಸುತ್ತಿದ್ದಾರೆ. ಈ- ಸ್ಟಾಂಪಿಂಗ್ ಸೇವೆ, ಗುಂಪು ವಿಮಾ ಸೌಲಭ್ಯಗಳು, ಸಹಕಾರಿಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಹಧನ ವಿತರಣೆ, ಕ್ಯಾನ್ಸರ್ ಪೀಡಿತ ಸದಸ್ಯರಿಗೆ ಅನುಕಂಪ ಪರಿಹಾರ ವಿತರಣೆ, ಕಲೆ-ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವುದು, ಈ ಎಲ್ಲಾ ಕಾರ್ಯಕ್ರಮಗಳು ಹಿಂದಿನಂತೆ ಮುಂದೆಯೂ, ಮುಂದುವರಿಸಿಕೊಂಡು ಬರಲಾಗುವುದು ಎಂದರು.

2022-23ನೇ ಸಾಲಿನಲ್ಲಿ ದ್ವಿ-ದಶಮಾನೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ವರ್ಷ ಪೂರ್ತಿ ವಾರ್ಷಿಕ ಆಚರಣೆಯನ್ನು ಆಚರಿಸುವ ಸಂಕಲ್ಪ ಮಾಡಿದ್ದೇವೆ. ದ್ವಿ-ದಶಮಾನೋತ್ಸವ ವರ್ಷದಲ್ಲಿ ಈಗಿನ 80ಕೋಟಿ ರೂಪಾಯಿಗಳ ವ್ಯವಹಾರವನ್ನು 100 ಕೋಟಿಗೆ ರೂಪಾಯಿಗೆ ವಿಸ್ತರಿಸುವುದು, 30 ಕೋಟಿ ರೂಪಾಯಿಗಳ ಸ್ವಂತ ಬಂಡವಾಳ ಹೊಂದುವುದು, 20 ಕೋಟಿ ರೂ.ಗೂ ಮಿಕ್ಕು ಸಾಲನೀಡುವುದು ಹಾಗೂ ಹೊಸದೊಂದು ಶಾಖೆ ಪ್ರಾರಂಭಿಸುವುದು, ಮುಂತಾದ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ದ್ವಿ-ದಶಮಾನೋತ್ಸವ ವರ್ಷದಲ್ಲಿ ಕನಿಷ್ಟ ಕಾರ್ಯಕ್ರಮಗಳನ್ನು ವರ್ಷಪೂರ್ತಿ ನಡೆಸುವ ವಿಚಾರವಿದ್ದು, ವಿವಿಧ ರೀತಿಯ ವಿಚಾರ ಸಂಕಿರ್ಣ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆರೋಗ್ಯ ಶಿಬಿರ ಮುಂತಾದ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶ್ರೀಮಾತಾ ದ್ವಿ ದಶಮಾನೋತ್ಸವ “ಸ್ಮರಣ ಸಂಚಿಕೆಯನ್ನು” ಹೊರತರಲಾಗುತ್ತದೆ. ಹಿರೇಸರದಲ್ಲಿ ಸೆಪ್ಟೆಂಬರ್ 24 ರಂದು ಬೆಳಿಗ್ಗೆ 9.30 ಘಂಟೆಗೆ ಪತ್ತೇತರ ಶಾಖೆಯು ಉದ್ಘಾಟನೆಗೊಳ್ಳಲಿದೆ. ಅದೇ ದಿನ 3.30 ಘಂಟೆಗೆ ಶಾಖಾ ಆವರಣದಲ್ಲಿ ಈ ಸಾಲಿನ ಸರ್ವ ಸಾಧಾರಣ ಸಭೆಯನ್ನು ಕರೆಯಲಾಗಿದೆ ಹಾಗೂ ಸಂಜೆ 4.30ರಿಂದ ಶ್ರೀಮಾತಾ ಟ್ರಸ್ಟ್ ಸಹಯೋಗದೊಂದಿಗೆ ಗ್ರಾಹಕರ ಸಮಾವೇಶದಲ್ಲಿ ಸಾಧಕರಿಗೆ ಸನ್ಮಾನ, ಗ್ರಾಹಕರಿಗೆ ಗೌರವ ಅಭಿನಂದನೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಅನುಕಂಪ ಪರಿಹಾರಧನ ವಿತರಣೆ ಹಾಗೂ ಕ್ಯಾನ್ಸರ್ ಪೀಡಿತರಿಗೆ ಸಹಾಯಧನ ವಿತರಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

300x250 AD

ನಮ್ಮ ಸಹಕಾರಿ ಸಂಘದ ಎಲ್ಲಾ ಶಾಖೆಗಳನ್ನು ಕೇಂದ್ರಿಕೃತ ವ್ಯವಸ್ಥೆಗೆ ಅಳವಡಿಸಿದೆ. ಈ ವರ್ಷ ಯಲ್ಲಾಪುರ ಶಾಖೆಯನ್ನು ಉತ್ತಮ ಶಾಖೆ ಎಂದು ಪರಿಗಣಿಸಿ, ಸರ್ವ ಸಾಧಾರಣ ಸಭೆಯಲ್ಲಿ, ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವು 5 ಉತ್ತಮ ಗ್ರಾಹಕರನ್ನು ಅಭಿನಂದಿಸುತ್ತೇವೆ. ಶ್ರೀಮಾತಾ ಟ್ರಸ್ಟ್ ಜೊತೆ ಸೇರಿ ಸಾಂಸ್ಕೃತಿಕ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಸಹಕಾರಿ ಸಂಘದ ದೈನಂದಿನ ವ್ಯವಹಾರಗಳನ್ನು ಹಾಗೂ ಸಲಹಾ ಸಮಿತಿಯೊಡನೆ ನಿರಂತರವಾಗಿ ವಿಡಿಯೋ ಕಾನ್ಸರೆನ್ಸ್ ಮುಖಾಂತರವಾಗಿ ಪತ್ತೇತರ ಶಾಖೆಯಿಂದ ನಿರ್ವಹಿಸಲಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಈರಾಪುರ ಮಾತನಾಡಿ, ದಕ್ಷ ಆಡಳಿತಗಾರರು. ಶಿಸ್ತುಬದ್ಧ ನೌಕರವೃಂದ, ಪ್ರಾಮಾಣಿಕ ಸದಸ್ಯರುಗಳನ್ನು ಹೊಂದಿದ್ದ ನಮ್ಮ ಸಹಕಾರಿ ಸಂಘದ ಅಧ್ಯಕ್ಷರಾದ ಜಿ ಎನ್ ಹೆಗಡೆ ಹಿರೇಸರ ಅವರಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇವರು ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಸಂಘಕ್ಕೆ ಸಂಘದ ಆಡಳಿತ ಮಂಡಳಿ, ಸಂಘದ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳಿಗೆ ದೊರಕಿದ ಗೌರವವಾಗಿದೆ ಎಂದು ಹೇಳಿದರು.

ಸಂಘದ ನಿರ್ದೇಶಕರುಗಳಾದ ಆರ್.ಎನ್.ಭಟ್, ರವಿ ಹೆಗಡೆ, ಆರ್.ಡಿ.ಹೆಬ್ಬಾರ್, ಕೆ.ಎಸ್.ಭಟ್, ಗೌರವ ಸಲಹೆಗಾರರಾದ ಜಿ.ಕೆ.ಹೆಗಡೆ, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಗೋಪಾಲಕೃಷ್ಣ ಎಸ್.ಹೆಗಡೆ, ನಿಯೋಜಿತ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ವೇರ್ಣೇಕರ ಪತ್ರಿಕಾಗೋಷ್ಠಿಯಲ್ಲಿದ್ದರು.

Share This
300x250 AD
300x250 AD
300x250 AD
Back to top