ಅಂಕೋಲಾ: ಪ್ರತಿಭೆ ಎಂದೂ ಬತ್ತದ ಸ್ಪೂರ್ತಿಯ ಸೆಲೆ,ಅದಕ್ಕೆ ನೀರೆರೆದು ಪೋಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೇಳಿದರು.
ಅವರು ಹಿಚ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮಾದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶೆಟಗೇರಿ ಗ್ರಾಮಪಂಚಾಯತ ಅಧ್ಯಕ್ಷೆ ಸವಿತಾ ನಾಯಕ, ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಸಿದ್ಧಗೊಂಡಿರುವ ಈ ಅವಕಾಶವನ್ನು ಎಲ್ಲ ಮಕ್ಕಳು ಬಳಸಿಕೊಳ್ಳಬೇಕೆಂದು ಶುಭಕೋರಿದರು.
ಇದೇ ಸಂದರ್ಭದಲ್ಲಿ ಹಿಚ್ಕಡ ಕ್ಲಸ್ಟರ್ ಸಿಆರ್‌ಪಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ದೀಪಾ ನಾಯಕ ಅವರಿಗೆ ನಾಗರಿಕ ಸನ್ಮಾನ ಮಾಡಲಾಯಿತು. ವೇದಿಕೆಯ ಮೇಲೆ ಸಿಆರ್‌ಪಿ ಶಾಂಬಾ ಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಚಂದ್ರಕಲಾ ಆಗೇರ, ಮುಖ್ಯಾಧ್ಯಾಪಕ ವೆಂಕಮ್ಮ ಆಗೇರ, ರಾಜಮ್ಮ ನಾಯಕ ಉಪಸ್ಥಿತರಿದ್ದು ಶುಭಕೋರಿದರು. ಬಾಸಗೋಡ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಸುಮಂಗಲಾ ನಾಯಕ ಸ್ವಾಗತ ಕೋರಿದರು. ಶಿಕ್ಷಕಿ ವೀಣಾ ಹೆಗಡೆ ವಂದಿಸಿದರು. ರಾಜೇಶ ನಾಯಕ ನಿರೂಪಿಸಿದರು.