• Slide
    Slide
    Slide
    previous arrow
    next arrow
  • ಕದಂಬ ಮಾರ್ಕೆಟಿಂಗ್ ವಾರ್ಷಿಕ ಸರ್ವ ಸಾಧಾರಣ ಸಭೆ

    300x250 AD

    ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ವಾರ್ಷಿಕ ಸರ್ವೇಸಾಧಾರಣ ಸಭೆಯು ಸೆ.21 ರಂದು ನಡೆಯಿತು. 2021-22 ನೇ ಸಾಲಿನಲ್ಲಿ ಸಂಸ್ಥೆಯು 46.83 ಕೋಟಿ ವ್ಯವಹಾರ ನಡೆಸಿದ್ದು, ರೂ 19.33 ಲಕ್ಷ ಲಾಭ ಗಳಿಸಿದೆ. ಸಂಸ್ಥೆಯ ವ್ಯವಹಾರ ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ. 25 ರಷ್ಟು ಹೆಚ್ಚಿದೆ. ದಿನಾಂಕ 31.03.2022 ಕ್ಕೆ ಇದ್ದಂತೆ ಸಹಕಾರಿಯು 19.08 ಲಕ್ಷ ಷೇರು ಬಂಡವಾಳ ಹೊಂದಿದ್ದು, ರೂ 2.92 ಕೋಟಿ ಠೇವಣಿ ಹೊಂದಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.  

    ಸಭೆಯಲ್ಲಿ ಆರ್ಥಿಕ ವರ್ಷದ ಲಾಭ ಹಾನಿ ಕುರಿತು ಚರ್ಚಿಸಲಾಯಿತು ಹಾಗೂ ಲಾಭ ವಿಭಾಗಣೆ ಮತ್ತು ಮುಂದಿನ ವರ್ಷದ ಅಂದಾಜು ವೆಚ್ಚವನ್ನು ಅನುಮೋದಿಸಲಾಯಿತು.

    300x250 AD

    ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಶಂಭುಲಿಂಗ ಹೆಗಡೆಯವರು ಸಂಸ್ಥೆಯ ವೈವಿಧ್ಯಮಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿ, ಸಂಸ್ಥೆಯು ಹೊಸ-ಹೊಸ ವಿಚಾರಗಳಿಂದ ಗುರುತಿಸಿಕೊಂಡಿದ್ದು, ನಮ್ಮ ಭಾಗದ ಪ್ರಮುಖ ಬೆಳೆಯಾದ ಅಡಿಕೆ (ಹಸಿ‌ ಮತ್ತು ಕೊಳೆ) ಹಾಗೂ ಬಾಳೆಕಾಯಿಗೆ ಟೆಂಡರ್ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ ಸದಸ್ಯರಿಗೆ ಹೆಚ್ಚಿನ ಸೇವೆ ಒದಗಿಸುವ ನಿಟ್ಟಿನಲ್ಲಿ ಎರಡು ವರ್ಷದಿಂದ ಒಣ ಅಡಿಕೆ ಟೆಂಡರ್ ಆರಂಭಿಸಿದೆ. ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ನಮ್ಮ‌‌ ಸಂಸ್ಥೆಯ ಮೂಲಕ ಉಳಿದ ಉಪ ಉತ್ಪನ್ನಗಳ ಜೊತೆಗೆ ಅಡಿಕೆಯನ್ನೂ ವ್ಯವಹರಿಸಬೇಕು ಎಂದು ಕರೆ ನೀಡಿದರು. ಸಂಸ್ಥೆಯ ವತಿಯಿಂದ ಕಾಳುಮೆಣಸು, ಅರಿಷಿಣ, ಶುಂಠಿ ಹಾಗೂ ಜಾಯಿಪತ್ರೆಯನ್ನು ವಿದೇಶಕ್ಕೂ ರಫ್ತು ಮಾಡಲಾಗಿದೆ. ಆನ್ಲೈನ್‌ ಮೂಲಕವೂ ಕದಂಬ ಬ್ರ್ಯಾಂಡ್ ನ ನೂರಕ್ಕೂ ಅಧಿಕ‌ ಉತ್ಪನ್ನಗಳನ್ನು ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುವದು ಎಂದರು. ಸಂಸ್ಥೆಯ ಎಲ್ಲ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ವ್ಯವಸ್ಥಾಪಕ(ಪ್ರಭಾರ) ರಾಜೇಂದ್ರ ಜೋಶಿಯವರು ವಾರ್ಷಿಕ ವರದಿ ವಾಚಿಸಿ ನಿರೂಪಿಸಿದರು.  

    Share This
    300x250 AD
    300x250 AD
    300x250 AD
    Leaderboard Ad
    Back to top