ಸಿದ್ದಾಪುರ: ಸ್ಥಳೀಯ ಆಶಾಕಿರಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜ.ಮು.ರಾ. ಅಂಧಮಕ್ಕಳ ವಸತಿಶಾಲೆಯಲ್ಲಿ ಗುರುಸನ್ಮಾನ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡಮನೆ ವಹಿಸಿ ಮಾತನಾಡಿ, ಶಿಕ್ಷಕರನ್ನು ಗೌರವಿಸುವುದು ಉತ್ತಮ ಸಂಪ್ರದಾಯ. ಉನ್ನತ ಭವಿಷ್ಯ ರೂಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ರಾಷ್ಟ್ರಶಿಲ್ಪಿಗಳು, ಅವರು ಸಂಪದ್‌ಭರಿತರಾಗಿ ವರ್ಗದ ಕೋಣೆ ಪ್ರವೇಶಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ, ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ಟ್ರಸ್ಟ್ ಕೋಶಾಧ್ಯಕ್ಷ ನಾಗರಾಜ ಎಂ.ದೋಶೆಟ್ಟಿ ಅತಿಥಿಯಾಗಿ ಮಾತನಾಡಿ, ಟ್ರಸ್ಟ್ನ ವತಿಯಿಂದ ಗುರುಗಳನ್ನು ಸನ್ಮಾನಿಸಿದರು.
ಸನ್ಮಾನಿತ ಶಿಕ್ಷಕರುಗಳಾದ ಮುಖ್ಯಶಿಕ್ಷಕಿ ಕಮಲಾಕ್ಷಿ ನಾಯ್ಕ, ಜಯಣ್ಣ, ಲತಾ, ಆರತಿ ರವರು ಮಾತನಾಡಿದರು. ಶಿಕ್ಷಕಿಯರಾದ ರೇಖಾ, ಗೀತಾ, ಸಂಗೀತ ಶಿಕ್ಷಕರಾದ ನಾಗರಾಜ ಉಪಸ್ಥಿತರಿದ್ದರು. ಶೈಲಜಾ ಪಾವಸ್ಕರ ಬನವಾಸಿ ಅವರ ನೃತ್ಯ ಸಂಗಮ ಕಾರ್ಯಕ್ರಮ ನೆರವೇರಿತು. ನಾಗರಾಜ ಸಂಗೀತ ನಿರೂಪಿಸಿದರು. ಚಿನ್ನು, ಅನುಶ್ರೀ ಪ್ರಾರ್ಥಿಸಿದರು. ವಸಂತಕುಮಾರ ಸ್ವಾಗತಿಸಿದರು. ಮಾನ್ಯ ವಂದಿಸಿದರು. ನಾಗರಾಜ ಮರಾಠಿ ನಿರೂಪಿಸಿದರು.