• Slide
    Slide
    Slide
    previous arrow
    next arrow
  • ನಿವೃತ್ತ ಎಸ್‌ಬಿಐ ಅಧಿಕಾರಿ ಭೀಮಪ್ಪಗೆ ಸನ್ಮಾನ

    300x250 AD

    ದಾಂಡೇಲಿ: ನಗರದ ಎಸ್‌ಬಿಐ ಬ್ಯಾಂಕಿನಲ್ಲಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತರಾದ ಭೀಮಪ್ಪ ರಾಥೋಡ ಅವರನ್ನು ಎಸ್‌ಬಿಐ ಬ್ಯಾಂಕಿನ ಎಸ್.ಸಿ/ಎಸ್.ಟಿ ಎಂಪ್ಲಾಯಿಸ್ ವೆಲ್ಪೇರ್ ಅಸೋಸಿಯೇಶನ್ ವತಿಯಿಂದ ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ವಿಜ್ಞಾನ ಭವನದಲ್ಲಿ ಸನ್ಮಾನಿಸಲಾಗಿದೆ.
    ಎಸ್‌ಬಿಐನಲ್ಲಿ ಸೇವೆ ಸಲ್ಲಿಸುವುದರ ಜೊತೆಯಲ್ಲಿ ರಾಷ್ಟಿçÃಕೃತ ಬ್ಯಾಂಕ್‌ಗಳ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ, ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಸದಸ್ಯರಾಗಿ, ಎಸ್‌ಬಿಐ ಎಸ್.ಸಿ/ಎಸ್.ಟಿ ಎಂಪ್ಲಾಯಿಸ್ ವೆಲ್ಫೇರ್ ಅಸೋಶಿಯೇಶನ್ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿ ಆನಂತರ ಕಳೆದ ಮೂರು ವರ್ಷಗಳಿಂದ ಉಪ ಪ್ರಧಾನ ಕಾರ್ಯದರ್ಶಿಯಾಗಿ ಅನುಪಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
    ಸAವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್‌ಬಿಐ ಬ್ಯಾಂಕಿನ ಎಸ್.ಸಿ/ಎಸ್.ಟಿ ಎಂಪ್ಲಾಯಿಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಭೀಮಪ್ಪ ರಾಥೋಡ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಸಂಘಟನೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top