ಹೊನ್ನಾವರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಎಸ್‌ಡಿಎಮ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2022-23ನೇ ಸಾಲಿನ ತಾಲೂಕ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕಡತೋಕಾದ ಜನತಾ ವಿದ್ಯಾಲಯ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಸಂಗೀತಾ ಆರ್.ಗೌಡ 100 ಮೀ. ಹರ್ಡಲ್ಸ್ನಲ್ಲಿ ತೃತೀಯ, ಪ್ರಭಾವತಿ ಬಿ.ಗೌಡ ಚದುರಂಗದಲ್ಲಿ ದ್ವಿತೀಯ, ಜ್ಯೋತಿ ಎನ್.ಗೌಡ ತ್ರಿವಿಧ ಜಿಗಿತದಲ್ಲಿ ತೃತೀಯ, ಭೂಮಿಕಾ ಡಿ.ಗೌಡ 1500 ಮೀ. ಓಟದಲ್ಲಿ ದ್ವಿತೀಯ, ದಿವ್ಯ ಎಮ್.ಗೌಡ 100 ಮೀ. ಹರ್ಡಲ್ಸ್ನಲ್ಲಿ ಪ್ರಥಮ, ಶೃತಿಕಾ ಡಿ.ಮುಕ್ರಿ 600 ಮೀ. ಓಟದಲ್ಲಿ ಪ್ರಥಮ, ಬಾಲಕಿಯರ ಬಾಲ್ ಬ್ಯಾಂಡ್ಮಿAಟನ್‌ನಲ್ಲಿ ಪ್ರಥಮ, ಬಾಲಕರ ವಿಭಾಗದಲ್ಲಿ ವಿಘ್ನೇಶ್ವರ ಪಿ.ಗೌಡ 1500 ಮೀ. ಓಟದಲ್ಲಿ ತೃತೀಯ, ಕಾರ್ತಿಕ ಎಚ್.ಗೌಡ 100 ಮೀ. ಓಟ & 200 ಮೀ. ಓಟದಲ್ಲಿ ದ್ವಿತೀಯ, ಲೋಕೇಶ ಎಸ್.ಗೌಡ ತ್ರಿವಿಧ ಜಿಗಿತದಲ್ಲಿ ತೃತೀಯ, 110 ಮೀ. ಹರ್ಡಲ್ಸ್ನಲ್ಲಿ ಪ್ರಥಮ, ಧಮೇಂದ್ರ ಎಸ್.ಗೌಡ ತ್ರಿವಿಧ ಜಿಗಿತದಲ್ಲಿ ಪ್ರಥಮ, 110 ಮೀ. ಹರ್ಡಲ್ಸ್ನಲ್ಲಿ ತೃತೀಯ, ಬಾಲಕರ 4*100 ಮೀ. ರೀಲೆಯಲ್ಲಿ ದ್ವಿತೀಯ, ಬಾಲ್ ಬ್ಯಾಂಡ್ಮಿಂಟನ್ನಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರೀಡಾಕೂಟದ ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಸಂಸ್ಥೆಯ, ಶಾಲೆಯ, ಊರಿನ ಕೀರ್ತಿಯನ್ನ ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಟ್ರಸ್ಟಿಗಳು, ಶಾಲಾಭಿವೃಧ್ಧಿ ಸಮಿತಿಯವರು, ಪ್ರಾಚಾರ್ಯರು, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ಪೂರ್ವ ವಿದ್ಯಾರ್ಥಿಗಳು ಹಾಗೂ ಊರ ನಾಗರಿಕರು ಅಭಿನಂದಿಸಿ, ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣ ಆರ್.ಗೌಡ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ತರಬೇತಿ ನೀಡಿದ್ದಾರೆ.