Slide
Slide
Slide
previous arrow
next arrow

ಲಯನ್ಸ್ ವಲಯದ ಮೊದಲ ಸಮಾವೇಶ ಯಶಸ್ವಿ

300x250 AD

ಅಂಕೋಲಾ: ಪಟ್ಟಣದ ಗೋಕುಲ ರೆಸಿಡೆನ್ಸಿ ಕನ್‌ವೆನ್ಸನ್ ಹಾಲ್‌ನಲ್ಲಿ ಲಯನ್ಸ್ 317ಬಿಯ ಮೊದಲ ವಲಯ ಸಮಾವೇಶ ಝೋನ್ ಚೇರ್‌ಪರ್ಸನ್ ಐಶ್ವರ್ಯ ಮಾಸೂರಕರ ನೇತೃತ್ವದಲ್ಲಿ ಜರುಗಿತು.
ಲಯನ್ಸ್ ಕ್ಲಬ್ ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ ಮತ್ತು ಸದಾಶಿವಗಡ ಪಾಲ್ಗೊಂಡ ಈ ಸಭೆಯಲ್ಲಿ ‘ಗ್ಲೋಬಲ್ ಸರ್ವಿಸ್ ಟೀಮ್’ನ ಸುದೇಶ ಬೋರಕರ ಅತಿಥಿಗಳಾಗಿ ಆಗಮಿಸಿ, ದಿಕ್ಸೂಚಿ ಮಾತನಾಡಿ, ಸೇವಾ ಮನೋಭಾವನೆಯ ಗುರಿ ಮತ್ತು ದಿಶೆಯಲ್ಲಿ ಪ್ರಯತ್ನಗಳು ಸಾಗಬೇಕು ಎಂದರು. ಮಧುಮೇಹ, ಬಾಲ್ಯದ ಕ್ಯಾನ್ಸರ್, ಪರಿಸರ ಕುರಿತು ಅರಿವನ್ನು ಮೂಡಿಸಿ ಎಂದು ಕರೆ ನೀಡಿದರು.
ಆತಿಥೇಯ ಅಂಕೋಲಾ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಶೆಟ್ಟಿ, ಕಾರವಾರ ಲಯನ್ಸ್ ಅಧ್ಯಕ್ಷೆ ವಿನಯಾ ನಾಯ್ಕ, ಕುಮಟಾದ ಅಧ್ಯಕ್ಷೆ ವಿದ್ಯಾ ಶೇಟ್, ಗೋಕರ್ಣದ ಅನಿಲ್ ಶೇಟ್, ನಿಕಟಪೂರ್ವ ಅಧ್ಯಕ್ಷ ಸುರೇಶ ಡಿ.ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಕೋಲಾ ಸಿಟಿ ಲಯನ್ಸ್ ಕಾರ್ಯದರ್ಶಿ ನಯನಾ ಶೇಟ್, ಕಾರವಾರದ ಲಯನ್ಸ್ ಕಾರ್ಯದರ್ಶಿ ಕೆ.ಎಸ್.ಕಿನ್ನರಕರ, ಗೋಕರ್ಣದ ಲಯನ್ಸ್ ಕಾರ್ಯದರ್ಶಿ ಅಮಿತ್ ಗೋಕರ್ಣ, ಕುಮಟಾ ಲಯನ್ಸ್ ಕಾರ್ಯದರ್ಶಿ ಡಾ.ನಾಗರಾಜ ಭಟ್ ತಮ್ಮ ಕ್ಲಬ್‌ನ್ ತ್ರೈಮಾಸಿಕ ಸೇವಾ ಸಾಧನೆಗಳನ್ನು ಪ್ರಸ್ತುತಪಡಿಸಿದರು. ಝೋನ್ ಚೇರ್‌ಪರ್ಸನ್ ಭವಿಷ್ಯದಲ್ಲಿ ಸಾಧಿಸಬೇಕಾದ ಸೇವಾ ಕಾರ್ಯದ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಗಂಗಾಧರ ಅವರನ್ನು ಫಲ ತಾಂಬೂಲ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಲಯನ್ಸ್ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ನರ್ಸಿಂಗ್ ವಿದ್ಯಾರ್ಥಿ/ನಿಯರನ್ನು ಸನ್ಮಾನಿಸಲಾಯಿತು.
ಲಯನ್ ಉದಯಾನಂದ ನೇರಲಕಟ್ಟೆಯವರ ರಾಷ್ಟ್ರಧ್ವಜ ವಂದನೆಯೊಂದಿಗೆ ಆರಂಭಗೊಂಡ ಸಭೆಯನ್ನು ಲಯನ್ ಚಾರ್ಟರ್ ಸದಸ್ಯ ನಾರಾಯಣ ಎಚ್.ನಾಯ್ಕ ನಿಗದಿತ ಕಾರ್ಯಸೂಚಿಯಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ.ವಿಜಯದೀಪ್, ಡಾ.ಎಸ್.ಎಂ ಶೆಟ್ಟಿ, ವಿದ್ಯಾ ಶೆಟ್ಟಿ, ಮೋಹನ ಶೆಟ್ಟಿ, ಪ್ರತಿಭಾ ಬೋರಕರ, ನಾಗರಾಜ ಮಹಾಲೆ, ಕೋಶಾಧ್ಯಕ್ಷೆ ನೀತಾ ಮಹಾಲೆ, ಸುಬ್ರಹ್ಮಣ್ಯ ರೇವಣಕರ, ಸುಮಾ ರೇವಣಕರ, ಕೃಷ್ಣಾನಂದ ವ್ಹಿ.ಶೆಟ್ಟಿ, ಮಾಯಾ ಶೆಟ್ಟಿ, ಗಣಪತಿ ಎಂ.ಹೆಗಡೆ, ಶಶಿಧರ ಶೇಣ್ವಿ, ಸಹನಾ ಶೇಣ್ವಿ, ವಿನೋದ್ ಹರಿಕಂತ್ರ, ಡಾ.ವರ್ಷಾ ಇತರೆ ಕ್ಲಬ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

300x250 AD
Share This
300x250 AD
300x250 AD
300x250 AD
Back to top