• Slide
    Slide
    Slide
    previous arrow
    next arrow
  • ಡಿ.25ಕ್ಕೆ ಪ್ರಮೋದ ಹೆಗಡೆ 70ರ ಅಭಿನಂದನಾ ಸಮಾರಂಭ

    300x250 AD

    ಯಲ್ಲಾಪುರ: ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಹಿರಿಯ ಸಹಕಾರಿ ಪ್ರಮೋದ ಹೆಗಡೆಯವರ 70ರ ಅಭಿನಂದನಾ ಸಮಾರಂಭವನ್ನು ಡಿಸೆಂಬರ್ 25ರಂದು ಯಲ್ಲಾಪುರದಲ್ಲಿ ನಡೆಸಲು ನಿರ್ಣಯಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ವಿಜಯ ಹೆಗಡೆ ದೊಡ್ಮನೆ ಹೇಳಿದರು.
    ಯು.ಕೆ ಸೌಹಾರ್ದ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಅಭಿನಂದನಾ ಸಮಾರಂಭದ ಕುರಿತಾಗಿ ಕೈಗೊಳ್ಳಲಾದ ಪೂರ್ವಭಾವಿ ಕಾರ್ಯಗಳ ಕುರಿತು ವಿವರಿಸಿದ ಅವರು, ಈ ಸಂದರ್ಭದಲ್ಲಿ ಪ್ರಮೋದ ಹೆಗಡೆಯವರ ಕುರಿತಾದ ಅಭಿನಂದನಾ ಗ್ರಂಥವನ್ನು ಹೊರತರಲಾಗುತ್ತಿದೆ. ಗ್ರಂಥದಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಚಿಂತನೆಗಳು ಹಾಗೂ ಪರಿಸರ- ಪ್ರವಾಸೋದ್ಯಮದ ಕುರಿತು ನಾಡಿನ ಶ್ರೇಷ್ಟ ಬರಹಗಾರರ ಲೇಖನಗಳು ಇರಲಿವೆ. ಇದು ಸಂಗ್ರಹಯೋಗ್ಯ, ಅಧ್ಯಯನ ಪೂರ್ಣ ಗ್ರಂಥವಾಗಿ ಹೊರಹೊಮ್ಮಲಿದೆ ಎಂದರು.
    ಈಗಾಗಲೇ ಅಗತ್ಯವಾದ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು, ಸ್ವಾಗತ ಸಮಿತಿ, ಆರ್ಥಿಕ, ಪ್ರಚಾರ, ಸಾಂಸ್ಕೃತಿಕ, ಊಟೋಪಚಾರ ಮುಂತಾದ ವಿವಿಧ ಉಪ ಸಮಿತಿಗಳನ್ನು ರಚಿಸಿ, ಜಿಲ್ಲೆಯ ಹಿರಿ-ಕಿರಿಯರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ವಿಶೇಷವಾಗಿ ಪ್ರಮೋದ ಹೆಗಡೆಯವರ ಅಭಿಮಾನಿಗಳು, ಸ್ನೇಹಿತರು ಅನೇಕರಿದ್ದಾರೆ. ಅವರೆಲ್ಲರನ್ನೂ ಸಂಪರ್ಕಿಸಲಾಗಿದೆ. ಒಟ್ಟಾರೆಯಾಗಿ ಒಂದು ದಿನದ ಈ ಕಾರ್ಯಕ್ರಮವನ್ನು ಜನರ ಮನಸ್ಟಿನಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯುವಂತೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
    ಅಭಿನಂದನಾ ಗ್ರಂಥದ ಸಂಪಾದಕ ಕಾಶ್ಯಪ ಪರ್ಣಕುಟಿ, ಅಭಿನಂದನಾ ಸಮಿತಿಯ ಗೌ.ಪ್ರ. ಕಾರ್ಯದರ್ಶಿ ಪಿ.ಜಿ.ಹೆಗಡೆ ಕಳಚೆ, ಊಟೋಪಚಾರ ಸಮಿತಿಯ ಅಧ್ಯಕ್ಷ ಡಿ.ಶಂಕರ ಭಟ್ಟ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಸಿ.ಜಿ.ಹೆಗಡೆ, ಪ್ರಚಾರ ಸಮಿತಿಯ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಸಮಿತಿಯ ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ಪ್ರಭಾಕರ ಭಟ್ಟ, ಪ್ರಸಾದ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top