• Slide
    Slide
    Slide
    previous arrow
    next arrow
  • ಆಹಾರ ವಹಿವಾಟು ಪರವಾನಿಗೆದಾರರಿಗೆ ಆನ್‌ಲೈನ್ ನೋಂದಣಿ ಕಡ್ಡಾಯ: ಡಿಸಿ

    300x250 AD

    ಕಾರವಾರ: 12 ಲಕ್ಷ ವಹಿವಾಟು ಇರುವ ಎಲ್ಲ ಆಹಾರ ವಹಿವಾಟು ಪರವಾನಿಗೆದಾರರು ನೊಂದಣಿ ಹಾಗೂ 12 ಲಕ್ಷಕ್ಕಿಂತ ಅಧಿಕ ವಹಿವಾಟು ಇರುವ ಆಹಾರ ವಹಿವಾಟುದಾರರು https://foscos.fssai.gov.in/ ವೆಬ್‌ಸೈಟ್ ಮೂಲಕ ಕಡ್ಡಾಯವಾಗಿ ಪರವಾನಗಿ ಪ್ರಮಾಣ ಪತ್ರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಜಿಲ್ಲಾ ಮಟ್ಟದ ಸಲಹಾ ಸಮಿತಿಯಲ್ಲಿ ಮಾತನಾಡಿದ ಅವರು, ಆಹಾರ ಗುಣಮಟ್ಟ ಅಧಿಕಾರಿಗಳು ಜಿಲ್ಲೆಯ ಎಲ್ಲ ಸರ್ಕಾರಿ ಸಂಸ್ಥೆಗಳಾದ ವಸತಿ ನಿಲಯಗಳು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಬಗ್ಗೆ ತಪಾಸಣೆ ನಡೆಸಬೇಕು ಎಂದು ಹೇಳಿದರು. ಡಿ.ಡಿ.ಪಿ.ಐ, ಅಕ್ಷರ ದಾಸೋಹ ನೋಡಲ್ ಅಧಿಕಾರಿಗಳು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಅ.2 ರೊಳಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ನೊಂದಣಿ ಮಾಡಿಸಬೇಕು ಎಂದು ಸೂಚನೆ ನೀಡಿದರು.

    ಜಿಲ್ಲೆಯ ಎಲ್ಲ ತಾಲೂಕುಗಳಿಗೆ ತಿಂಗಳಿಗೆ ಒಂದು ಸಾರಿ ಬೇಟಿ ನೀಡಲಿಕ್ಕೆ ವೇಳಾಪಟ್ಟಿ ತಯಾರಿಸಿ ತಾಲೂಕಿನ ಹೋಟೆಲ್, ರೆಸಾರ್ಟ್ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಪರೀಶಿಲಿಸಿ ವರದಿ ನೀಡಬೇಕು ಹಾಗೂ ಒಂದು ವೇಳೆ ಅಸುರಕ್ಷಿತ ಆಹಾರ ಪದಾರ್ಥಗಳು ಹಾಗೂ ಕಲಬೇರಕೆ ಕಂಡುಬAದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

    300x250 AD

    ಶಾಲೆಗಳು, ಅಂಗನವಾಡಿ ಕೇಂದ್ರಗಳು, ರೆಸಾರ್ಟ, ಹೋಟೇಲಗಳಿಗೆ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಪರವಾನಿಗೆ ಪೆಡದುಕೊಳ್ಳುವಂತೆ ನೋಡಿಕೊಳ್ಳಬೇಕು ಮತ್ತು ನಗರ ಸ್ಥಳಿಯ ಸಂಸ್ಥೆಗಳು ಹಾಗೂ ಪಂಚಾಯತಗಳ ಸಹಕಾರದೊಂದಿಗೆ ಆನ್ ಲೈನ್ ಆಹಾರ ಗುಣಮಟ್ಟದ ನೊಂದಣಿ ಮಾಡಿಸಬೇಕು, ನೊಂದಣಿ ಮಾಡಿಸದೆ ಇರುವಂತವರಿಗೆ ದಂಡ ವಿಧಿಸಿ ಎಂದು ಸೂಚಿಸಿದರು.

    ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ಯಾಮಲಾ ಸಿ.ಕೆ., ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಯಗಾರಿಕಾ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಇನ್ನಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top