ಶಿರಸಿ: ಶಿರಸಿ 110/11 ಕೆ.ವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಾಗೂ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಶಾಖಾ ವ್ಯಾಪ್ತಿಯಲ್ಲಿ ಸೆ.21 ಬುಧವಾರ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.
ಸೆ.21 ರಂದು ಬೆಳಿಗ್ಗೆ10 ಘಂಟೆ ಇಂದ ಸಾಯಂಕಾಲ 5 ಘಂಟೆವರೆಗೆ ಶಿರಸಿ ಪಟ್ಟಣ ಶಾಖಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳು (ಕೆ.ಎಚ್.ಬಿ ಕಾಲೋನಿ ಹಾಗೂ ಕಸ್ತೂರಬಾನಗರ ಹೊರತುಪಡಿಸಿ) ಹಾಗೂ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ತಾರಗೋಡ, ಬನವಾಸಿ, ಸುಗಾವಿ, ಮಾರಿಗದ್ದೆ, ಕೆಂಗ್ರೆ, ದೇವನಳ್ಳಿ, ಸಂಪಖಂಡ, ಹುಲೇಕಲ್, ವಾನಳ್ಳಿ ಹಾಗೂ ಸಾಲ್ಕಣಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.