• Slide
  Slide
  Slide
  previous arrow
  next arrow
 • ವೀರಾಗ್ರಣಿ ಪಟ್ಟ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಗಣೇಶ ಗೌಡ

  300x250 AD

  ಶಿರಸಿ: ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ 600 ಮೀ. ಓಟ, ಗುಂಡು ಎಸೆತ ಹಾಗೂ ಚಕ್ರಎಸೆತ ಈ ಮೂರರಲ್ಲೂ ಗಣೇಶ ರಾಘವೇಂದ್ರ ಗೌಡ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ವೀರಾಗ್ರಣಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸ.ಹಿ.ಪ್ರಾ ಶಾಲೆ ಕೊಳಗಿಬೀಸ್’ನ ವಿದ್ಯಾರ್ಥಿಯಾದ ಗಣೇಶ್ ಗೌಡನ ಈ ಸಾಧನೆಯಿಂದ ಶಾಲೆ, ಊರು,ಕ್ಲಸ್ಟರ್ ಹಾಗೂ ವಲಯದ ಕೀರ್ತಿ ಹೆಚ್ಚಾಗಿದೆ . ಈ ಬಗ್ಗೆ ಶಾಲಾ ಶಿಕ್ಷಕರು, ಪಾಲಕರು, ಊರ ನಾಗರಿಕರು ಹಾಗೂ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಜಿಲ್ಲಾಮಟ್ಟಕ್ಕೆ ಶುಭ ಕೋರಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top