• Slide
  Slide
  Slide
  previous arrow
  next arrow
 • ‘ಕಮಲಾಕರ ಹೆಗಡೆ ಹುಕ್ಲಮಕ್ಕಿಗೆ’ ಹಾಸ್ಯಗಾರ ದತ್ತಿ ಪುರಸ್ಕಾರ

  300x250 AD

  ಸಿದ್ದಾಪುರ: ಯಕ್ಷಗಾನ ಅಕಾಡೆಮಿ ನೀಡುವ ಕರ್ಕಿ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಸಿದ್ದಾಪುರ ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕೆ ಅವರನ್ನು ತಾಲೂಕು ಕಸಾಪದವರು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.

  ಸಾಧಕರ ಮನೆಗೆ ಸಾಹಿತ್ಯ ಪರಿಷತ್ ಎನ್ನುವ ಶೀರ್ಷಿಕೆ ಅಡಿಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ, ಪ್ರದಾನ ಕಾರ್ಯದರ್ಶಿ ಅಣ್ಣಪ್ಪ ಶಿರಳಗಿ ಹಾಗೂ ಸದಸ್ಯೆ ಸುಜಾತಾ ಹೆಗಡೆ ದಂಟಕಲ್ ಅವರು ಕಮಲಾಕರ ಮಂಜುನಾಥ ಹೆಗಡೆ ಹುಕ್ಲಮಕ್ಕಿ ಹಾಗೂ ಅವರ ಪತ್ನಿ ಸುಮಿತ್ರಾ ಹೆಗಡೆ ಅವರನ್ನು ಸನ್ಮಾನಿಸಿದರು.
  ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್, ಹಾರ್ಸಿಕಟ್ಟಾ ಗ್ರಾಪಂ ಮಾಜಿ ಉಪಾಧ್ಯಕ್ಷ ಅಶೋಕ ಹೆಗಡೆ ಹಿರೇಕೈ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ಪರಮೇಶ್ವರ ಹೆಗಡೆ ಕಂಚನಳ್ಳಿ, ಕುಸುಮಾಕ್ಷಿ ಹೆಗಡೆ ಹುಕ್ಲಮಕ್ಕಿ ಶಶಿಧರ ಹೆಗಡೆ ಹುಕ್ಲಮಕ್ಕಿ, ವಿನುತಾ ಹೆಗಡೆ ಇತರರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top