Slide
Slide
Slide
previous arrow
next arrow

ದಸರಾ ಕ್ರೀಡಾಕೂಟ:ಚಾರ್ವಿ ವಾಳ್ಕೆ ಸಾಧನೆ

300x250 AD

ಕುಮಟಾ: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸರಸ್ವತಿ ಪಿಯು ಕಾಲೇಜ್‌ನ ವಿದ್ಯಾರ್ಥಿನಿ ಚಾರ್ವಿ ವಾಳ್ಕೆ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ತಾಲೂಕಿನ ಕಡ್ಲೆ ಗಾಂಧಿವನದಲ್ಲಿ ಉತ್ತರ ಕನ್ನಡ ಜಿಪಂ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ತಾಪಂ ಹಾಗೂ ತಾಲೂಕಾ ಯುವ ಸಂಯುಕ್ತ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸರಸ್ವತಿ ಪಿಯು ಕಾಲೇಜ್‌ನ ವಿದ್ಯಾರ್ಥಿನಿ ಚಾರ್ವಿ ಕಿಶನ್ ವಾಳ್ಕೆ ಉತ್ತಮ ಸಾಧನೆ ಮಾಡಿದ್ದಾಳೆ.
ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳ ಸಾಧನೆಗೆ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಶಾಲಾ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಕ್ರೀಡಾಕೂಟದಲ್ಲೂ ಉತ್ತಮ ಸಾಧನೆ ಮಾಡುವ ಮೂಲಕ ಊರಿಗೆ ಕೀರ್ತಿ ತರಲೆಂದು ಪಾಲಕರು, ಊರ ನಾಗರಿಕರು ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top