Slide
Slide
Slide
previous arrow
next arrow

ಜೀವರಕ್ಷಕ ಓಝೋನ್‌ಗೆ ಸಂರಕ್ಷಣೆ ಅಗತ್ಯ:ಪ್ರವೀಣ ನಾಯಕ

300x250 AD

ಕುಮಟಾ: ಮನುಷ್ಯ ಹಾಗೂ ಪ್ರಾಣಿಗಳು ಬದುಕಲು ಆಮ್ಲಜನಕ ಅತ್ಯಗತ್ಯ. ಅದೇ ರೀತಿ ಓಝೋನ್ ಕೂಡ ಅಷ್ಟೇ ಮುಖ್ಯ. ಆದ್ದರಿಂದ ಜೀವರಕ್ಷಕನಾದ ಓಝೋನ್‌ಗೆ ಸಂರಕ್ಷಣೆ ಬೇಕು ಎಂದು ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ನುಡಿದರು.
ಅವರು ತಾಲೂಕಿನ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಹಿರೇಗುತ್ತಿ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಸೆಕೆಂಡರಿ ಹೈಸ್ಕೂಲ್, ಪ್ರಕೃತಿ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಳೆಗಾಲದಲ್ಲಿ ಕೊಡೆ ನಮ್ಮನ್ನು ರಕ್ಷಿಸುವ ಹಾಗೆ, ಓಝೋನ್ ಪದರವು ಅಗೋಚರ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನವನ್ನು ವಿದ್ಯಾರ್ಥಿಗಳೆಲ್ಲರೂ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ, ಜೀವರಕ್ಷಕ ಓಝೋನ್ ಪದರಿಗೆ ಸಂರಕ್ಷಣೆ ಬೇಕು. ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬರಿಂದಲೂ ಸಂರಕ್ಷಣೆಯ ಕಾರ್ಯ ಆಗಬೇಕಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು.ಹಿರೇಗುತ್ತಿ ಮಾತನಾಡಿ, ಈ ಪ್ರಕೃತಿ ಮನುಷ್ಯನಿಗೆ ಬೇಕಾದ ಎಲ್ಲ ಅವಶ್ಯಕತೆಗಳನ್ನು ಪೂರೈಸಿದೆ. ಆದರೂ ದುರಾಸೆಯಿಂದ ಮನುಷ್ಯ ಪ್ರಕೃತಿಯ ಶೋಷಣೆ ಮಾಡುತ್ತಿದ್ದಾನೆ. ಪ್ರಕೃತಿ ಮಾತೆ ಮುನಿದರೆ ಮನುಷ್ಯನ ಅಳಿವಿಗೆ ಅರೆಕ್ಷಣ ಸಾಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಕುಮಟಾ ಕಮಲಾ ಬಾಳಿಗಾ ಬಿಇಡಿ ಪ್ರಶಿಕ್ಷಣಾರ್ಥಿ ಮಹಿಮಾ ಜಿ.ಗೌಡ, ಓಝೋನ್ ಕುರಿತು ಉಪನ್ಯಾಸ ನೀಡಿದರು. ಓಝೋನ್ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರವೇನು? ಎಂಬ ವಿಷಯದ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನಾಗರತ್ನ ಗೌಡ (ಪ್ರಥಮ), ಕವನ ಜಿ.ಗೌಡ (ದ್ವಿತೀಯ), ನಿರೀಕ್ಷಾ ಡಿ.ನಾಯಕ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿಜೇತರ ಯಾದಿಯನ್ನು ಬಿಇಡಿ ಪ್ರಶಿಕ್ಷಣಾರ್ಥಿ ಪಾರ್ವತಿ ಜಿ.ಹಳ್ಳೇರ ವಾಚಿಸಿದರು.
ಆರ್‌ಎಫ್‌ಓ ಶರತ ಶೆಟ್ಟಿ ಭಟ್ಕಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಜಾನಕಿ ಗೊಂಡ, ಮಹಾದೇವ ಗೌಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಬಿಇಡಿ ಪ್ರಶಿಕ್ಷಣಾರ್ಥಿ ವಿದ್ಯಾಧರ ನಾಯಕ ಉಪಸ್ಥಿತರಿದ್ದರು. ಕಾರ್ಯಕ್ರಮ ನಾಗಶ್ರೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಮ್.ಜಿ.ನಾಗಭೂಷಣ ಸರ್ವರನ್ನೂ ಸ್ವಾಗತಿಸಿದರು. ಕಾಂಚಿಕಾ ನಾಯಕ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಜೇತ ಗುನಗ ವಂದಿಸಿದರು. ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top