• Slide
  Slide
  Slide
  previous arrow
  next arrow
 • ಅ.2ಕ್ಕೆ ನಾಣಿಕಟ್ಟಾದಲ್ಲಿ ಪೌರಾಣಿಕ ಯಕ್ಷಗಾನ ತಾಳಮದ್ದಲೆ

  300x250 AD

  ಸಿದ್ದಾಪುರ: ನಾಣಿಕಟ್ಟಾ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ, ನವರಾತ್ರಿ ದುರ್ಗಾದೇವಿ ಆರಾಧನೆಯ ಪ್ರಯುಕ್ತ ಅ-2 ಭಾನುವಾರ ಮಧ್ಯಾಹ್ನ ವೇ.ಮೂ.ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ಅವರ ಉಪಸ್ಥಿತಿಯಲ್ಲಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆಯಲ್ಲಿ ನಟರಾಜ ಎಮ್ ಹೆಗಡೆ &ಗೆಳೆಯರ ಬಳಗ (ಯಕ್ಷಮಿತ್ರ ಬಳಗ)ದವರ ಸಂಯೋಜನೆಯಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ದಿಗ್ಗಜ ಕಲಾವಿದರಿಂದ, ಅದ್ಧೂರಿ ಪೌರಾಣಿಕ ಯಕ್ಷಗಾನ ತಾಳಮದ್ದಲೆ ಆಯೋಜಿಸಲಾಗಿದೆ
  ವಿಶೇಷ ಆಕರ್ಷಣೆಯಾಗಿ ಹಿಮ್ಮೇಳದಲ್ಲಿ ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಯಕ್ಷಗಾನದ ಉದಯೋನ್ಮುಖ ಕವಿಗಳಾದ ಪವನ ಕಿರಣಕೇರೆ, ಡಾ. ವಿನಾಯಕ ಭಟ್ಟ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಇನ್ನಿತರರು, ಕಲೆಯ ಆರಾಧಕರಾದ “ಕಲಾಭಾಸ್ಕರ” ಬಿರುದಾಂಕಿತ ಮಾಬ್ಲೇಶ್ವರ ಭಟ್ಟ ಇಟಗಿ ಅವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವು ನಡೆಯಲಿದೆ.
  ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆಯನ್ನು, ಕಲಾವಿದರನ್ನು, ಕಲಾಸಂಘಟಕರನ್ನೂ ಸಹ ಉಳಿಸಿ-ಬೆಳೆಸಿ,ಪ್ರೋತ್ಸಾಹಿಸಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top