• Slide
  Slide
  Slide
  previous arrow
  next arrow
 • ಬಗ್ರಾಣಿ ಗೋಳಿಬೀರಪ್ಪ ದೇವಾಲಯಕ್ಕೆ ಎಸ್‌ಕೆಆರ್‌ಡಿಪಿಯಿಂದ 2 ಲಕ್ಷ ಅನುದಾನ

  300x250 AD

  ಹೊನ್ನಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇವರ ಸಮುದಾಯ ಅಬಿವೃದ್ಧಿ ಕಾರ್ಯಕ್ರಮದಡಿ ತಾಲೂಕಿನ ಬಗ್ರಾಣಿ ಶ್ರೀಗೋಳಿಬೀರಪ್ಪ ದೇವಾಲಯದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ 2 ಲಕ್ಷ ಅನುದಾನದ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ವಾಸಂತಿ ಅಮೀನ್ ದೇವಾಲಯ ಅಭಿವ್ರದ್ಧಿ ಸಮಿತಿಯ ಸದಸ್ಯರಿಗೆ ವಿತರಿಸಿದರು. ನಂತರ ಯೋಜನೆಯ ಮೂಲಕ ಕೈಗೊಂಡ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

  ದೇವಾಲಯದ ಸಮಿತಿಯ ಅಧ್ಯಕ್ಷ ಮಂಜುನಾಥ್ ಗೌಡ ಮಂಜೂರಾತಿ ಪತ್ರ ಪಡೆದು ಧರ್ಮಸ್ಥಳದಿಂದ ಪಡೆದ ಅನುದಾನ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಆದಷ್ಟು ಶೀಘ್ರವಾಗಿ ಈ ಕಟ್ಟಡವನ್ನು ಸಮಾಜದ ಬಳಕೆಗೆ ನೀಡುವುದಾಗಿ ಸಂತೋಷ ವ್ಯಕ್ತಪಡಿಸಿದರು.

  300x250 AD

  ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ದೇವರಾಜ್, ದೇವಸ್ಥಾನ ಖಜಾಂಚಿ ರಾಮ ಗೌಡ, ಊರಿನ ಮುಖಂಡ ನಾಗಪ್ಪ ಗೌಡ, ಮೊನ್ನ ಗೌಡ, ಮಂಜುನಾಥ ಗೌಡ, ವಲಯ ಮೇಲ್ವಿಚಾರಕ ನಾಗರಾಜ್ ಕೆ., ಸೇವಾಪ್ರತಿನಿಧಿ ಚೇತನಾ, ಇನ್ನಿತರ ಊರ ಮುಖಂಡರು, ಸಮಾಜದವರು ಹಾಜರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top