• Slide
    Slide
    Slide
    previous arrow
    next arrow
  • ಭೂ ಕುಸಿತ ಪ್ರದೇಶಕ್ಕೆ ಗಜಾನನ ಪೈ ಭೇಟಿ:ಪರಿಶೀಲನೆ

    300x250 AD

    ಕುಮಟಾ: ತಾಲೂಕಿನ ಅಳಕೋಡ ಗ್ರಾಪಂ ವ್ಯಾಪ್ತಿಯ ಹೆಬೈಲ್‌ನ ಹೊರಮಸಗಿ ಸೇತುವೆ ಬಳಿ ಭೂ ಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿದ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ ಅವರು ಪರಿಶೀಲನೆ ನಡೆಸಿದರು.

    ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ತಾಲೂಕಿನ ಹೆಬೈಲ್ ಹೊರಮಸಗಿ ಸೇತುವೆ ಬಳಿ ಭೂ ಕುಸಿತ ಉಂಟಾದ ಪರಿಣಾಮ ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದಿದೆ. ಇದರಿಂದ ಮೂವತ್ತು ಮೀಟರ್ ಉದ್ದದ ಹಾಗೂ 5 ಮೀಟರ್ ಎತ್ತರದ ಸಿಮೆಂಟ್ ಕಾಂಕ್ರೀಟ್ ವಾಲ್ ಸಂಪೂರ್ಣ ಕುಸಿದು ಹಳ್ಳಕ್ಕೆ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಬಗ್ಗೆ ಮಾಹಿತಿ ಪಡೆದ ಗಜಾನನ ಪೈ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    ಅಲ್ಲದೇ ಇಲ್ಲಿನ ದುಃಸ್ಥಿತಿ ಬಗ್ಗೆ ಅಧಿವೇಶನದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಶಾಸಕರು ಪಿಡಬ್ಲುಡಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಶಾಸಕರ ಸೂಚನೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಿಡಬ್ಲುಡಿ ಅಧಿಕಾರಿಗಳಿಗೆ ಈ ರಸ್ತೆಯ ದುಃಸ್ಥಿತಿಯ ಬಗ್ಗೆ ಗಜಾನನ ಪೈ ಅವರು ತಿಳಿಸಿದರು. ಅಲ್ಲದೇ ತುರ್ತು ಕಾಮಗಾರಿ ನಡೆಸಿ, ರಸ್ತೆ ಸರಿಪಡಿಸಿಕೊಡುವಂತೆ ಆಗ್ರಹಿಸಿದರು. ಆ ಭಾಗದ ಜನರು ಸೇತುವೆ ಮುಂಭಾಗದ 800 ಮೀಟರ್ ರಸ್ತೆಯನ್ನು ಸುಧಾರಣೆ ಮಾಡುವಂತೆ ಗಜಾನನ ಪೈ ಅವರ ಬಳಿ ಮನವಿ ಮಾಡಿದರು. ಈ ಬಗ್ಗೆ ಶಾಸಕರ ಗಮನ ಸೆಳೆದು, ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.

    300x250 AD

    ಈ ಸಂದರ್ಭದಲ್ಲಿ ಪಿಡಬ್ಲುಡಿ ಇಂಜಿನೀಯರ್ ಸುದರ್ಶನ ಮಡಿವಾಳ, ಅಳಕೋಡ್ ಗ್ರಾಪಂ ಸದಸ್ಯ ವಿನಾಯಕ ನಾಯ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top