Slide
Slide
Slide
previous arrow
next arrow

ಬಿಸಿಯೂಟ ನೌಕರರಿಗೆ ವೇತನ ನೀಡುವಂತೆ ಧೀರೂ ಶಾನಭಾಗ ಆಗ್ರಹ

300x250 AD

ಕುಮಟಾ: ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಬಿಸಿಯೂಟ ನೌಕರರಿಗೆ ಕಳೆದ ಐದು ತಿಂಗಳಿನಿಂದ ವೇತನ ನೀಡದೇ ಸತಾಯಿಸಲಾಗುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ ಆಗ್ರಹಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ನನ್ನ ಮನೆಗೆ ಬಂದ ಹೆಗಡೆ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಅಕ್ಷರ ದಾಸೋಹದ ನೌಕರರಿಗೆ ಕಳೆದ ಐದು ದಿನಗಳಿಂದ ವೇತನವಾಗಿಲ್ಲ. ಸರ್ಕಾರ ನೀಡುವ ಅಲ್ಪ ವೇತನವನ್ನೂ ಬಡ ನೌಕರರಿಗೆ ನೀಡದೆ ಸತಾಯಿಸಲಾಗುತ್ತಿರುವ ಸರ್ಕಾರದ ನಿರ್ಲಕ್ಷö್ಯ ಧೊರಣೆಯನ್ನು ಖಂಡಿಸುತ್ತೇನೆ. ಬಿಸಿಯೂಟದ ನೌಕರರು ಸಾಮಾನ್ಯವಾಗಿ ವಿದವೆಯರು ಮತ್ತು ಕಡು ಬಡವರಾಗಿದ್ದು, ಪ್ರತಿ ತಿಂಗಳು ವೇತನವಾಗದಿದ್ದರೆ ಅವರ ಜೀವನ ನಿರ್ವಹಣೆಗೆ ಕಷ್ಟವಾಗುತ್ತದೆ. ಸಾಲ ಮಾಡಿ ಜೀವನ ನಡೆಸುವ ದುಃಸ್ಥಿತಿ ಇದೆ. ಹಾಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಿ, ಮೇಲಾಧಿಕಾರಿಗಳ ಮೂಲಕ ಸಂಬಂಧಪಟ್ಟ ಸಚಿವರ ಗಮನ ಸೆಳೆಯಬೇಕು ಎಂದು ಆಗ್ರಹಿಸಿದ್ದಾರೆ.

300x250 AD

ಪ್ರತಿ ತಿಂಗಳು ಸಮರ್ಪಕವಾಗಿ ವೇತನವಾಗುವಂತೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಈಗಾಗಲೇ ಶಾಸಕ ದಿನಕರ ಶೆಟ್ಟಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮಾಜಿ ಸಚಿವ ಮತ್ತು ಶಾಸಕ ಆರ್.ವಿ.ದೇಶಪಾಂಡೆ ಅವರಿಗೂ ಕರೆ ಮಾಡಿ, ಬಿಸಿಯೂಟ ನೌಕರರಿಗೆ ಬಾಕಿ ಇರುವ ವೇತನವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದೇನೆ. ಇಲ್ಲವಾದರೆ ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು. ಅಲ್ಲದೇ ಸರ್ಕಾರ ಇರುವ ಯೋಜನೆಗಳನ್ನು ಸಮರ್ಪವಾಗಿ ಅನುಷ್ಠಾನಗೊಳಿಸುವ ಬದಲು ಹೊಸ ಹೊಸ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತಿದೆ. ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ವಿವಿಧ ಸೌಲಭ್ಯಗಳು ಸರಿಯಾಗಿ ದೊರಕದಂತಾಗಿದೆ. ಬೆಲ ಏರಿಕೆಯ ಬಿಸಿಗೆ ಸಾಮಾನ್ಯಜನ ತತ್ತರಿಸುವಂತಾಗಿದೆ. ಇದನ್ನೆಲ್ಲ ನೋಡಿದರೆ ಸರ್ಕಾರದ ಆಡಳಿತ ವ್ಯವಸ್ಥೆ ಹದೆಗೆಡುತ್ತಿದೆಯೇ ಎಂಬ ಪ್ರಶ್ನೆ ಜನರನ್ನು ಕಾಡುವಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

Share This
300x250 AD
300x250 AD
300x250 AD
Back to top