• first
  second
  third
  previous arrow
  next arrow
 • ಕಿರವತ್ತಿ ಗ್ರಾ.ಪಂ: ನೂತನ ಅಧ್ಯಕ್ಷರಾಗಿ ಜಬೀನಾ ಉಸ್ಮಾನ್ ಆಯ್ಕೆ

  300x250 AD

  ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾ.ಪಂನ ನೂತನ ಅಧ್ಯಕ್ಷರಾಗಿ ಜಬೀನಾ ಉಸ್ಮಾನ್ ಪಟೇಲ್ ಆಯ್ಕೆಯಾಗಿದ್ದಾರೆ.

  ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಜಬೀನಾ ಪಟೇಲ್ ಹಾಗೂ ನಯನಾ ಶೆಂಡಿಗೆ ನಾಮಪತ್ರ ಸಲ್ಲಿಸಿದ್ದರು.ಅವರಲ್ಲಿ ಜಬೀನಾ ಪಟೇಲ್ 15 ಮತಗಳನ್ನು ಪಡೆದು ವಿಜಯಿಯಾದರೆ, ನಯನಾ 8 ಮತಗಳನ್ನು ಪಡೆದು ಪರಾಭವಗೊಂಡರು. ಒಂದು ಮತ ತಿರಸ್ಕೃತಗೊಂಡಿತು.

  300x250 AD

   ಚುನಾವಣಾಧಿಕಾರಿಯಾಗಿ ತಾ.ಪಂ ಇಒ ಜಗದೀಶ ಕಮ್ಮಾರ ಕಾರ್ಯನಿರ್ವಹಿಸಿದರು. ಪಿಡಿಒ ರಮೇಶ ರೆಡ್ಡಿ ಹಾಗೂ ಸದಸ್ಯರು ಇದ್ದರು. ಸ್ಥಳೀಯ ಮುಖಂಡ ವಿಜಯ ಮಿರಾಶಿ, ಗ್ರಾ.ಪಂ ಸದಸ್ಯ ರೆಹಮತ್ ಅಬ್ಬಿಗೇರಿ ಇತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

  Share This
  300x250 AD
  300x250 AD
  300x250 AD
  Back to top