Slide
Slide
Slide
previous arrow
next arrow

ರಾಷ್ಟ್ರಮಟ್ಟದ ಇನ್ಸ್ಪೈರ್ ಪ್ರದರ್ಶನಕ್ಕೆ ಲಯನ್ಸ್ ಶಾಲೆಯ ಅನ್ವಿತಾ

300x250 AD

ಶಿರಸಿ: ನ್ಯಾಷನಲ್ ಇನ್ನೋವೇಟಿವ್ ಪೌಂಡೇಷನ್ ಕೇಂದ್ರ ಸರಕಾರದ ವಿವಿಧ ಇಲಾಖೆಗಳೊಡನೆ ಆಯೋಜಿಸಿರುವ ಸೆಪ್ಟೆಂಬರ್ 14 ರಿಂದ 16 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಇನ್ಸ್ಪೈರ್ ಅವಾರ್ಡ ರಾಷ್ಟ್ರಮಟ್ಟದ ವಸ್ತು ಪ್ರದರ್ಶನ ಹಾಗೂ ಮಾದರಿ ಸ್ಫರ್ಧೆಯಲ್ಲಿ (NLEPC- Inspire MANAK ), ನಗರದ ಲಯನ್ಸ್ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನ್ವಿತಾ ನವನೀತ ಶೆಟ್ಟಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾಳೆ.

ಬಟ್ಟೆ ಒಣಗಿಸುವ ಸರಳ ತಂತ್ರಜ್ಞಾನದ ಗೃಹೋಪಯೋಗಿ ವಿಜ್ಞಾನ ಮಾದರಿ( Easy Fly Drier) ಅನ್ವಿತಾಳ ಸಂಶೋಧನೆಯಾಗಿದೆ. ವಿದ್ಯಾರ್ಥಿನಿಯ ಈ ಸಾಧನೆಗೆ ಅವರ ಪಾಲಕರಾದ ನವನೀತ ಶೆಟ್ಟಿಯವರ ಪ್ರೋತ್ಸಾಹಕ್ಕೆ, ಮಾರ್ಗದರ್ಶಿ ಶಿಕ್ಷಕರಾದ ಸಚಿನ್ ಕೋಡಿಯಾ ಇವರ ಸಲಹೆಗೆ, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು, ಶಿರಸಿ ಲಯನ್ಸ್ ಕ್ಲಬ್ ಬಳಗ ತುಂಬು ಹೃದಯದಿಂದ ಅಭಿನಂದಿಸಿ, ಆಶೀರ್ವಾದಪೂರ್ವಕವಾಗಿ ಶುಭಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top