Slide
Slide
Slide
previous arrow
next arrow

ಮೊಬೈಲ್ ಕಳ್ಳತನ:ಬಾಲಾಪರಾಧಿಗಳ ಪಟ್ಟಿ ಸೇರಿದ ವಿದ್ಯಾರ್ಥಿಗಳು

300x250 AD

ಹೊನ್ನಾವರ : ತಾಲೂಕಿನ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ ಕಲಿಯುತ್ತಿರುವ ಕುಮಟಾ ಮೂಲದ ವಿದ್ಯಾರ್ಥಿಗಳಿಬ್ಬರು ಮೊಬೈಲ್ ಕಳ್ಳತನ ಮಾಡಿ ಬಾಲಾಪರಾಧಿಗಳ ಪಟ್ಟಿ ಸೇರಿದ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಅಂಕೋಲಾ ಹಾಗೂ ಹೊನ್ನಾವರದಲ್ಲಿ ನಡೆದ ಮೊಬೈಲ್ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಈ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಹೊನ್ನಾವರ ಬಸ್ಟಾಂಡ, ಹತ್ತಿರ ಕಿಂತಾಲಕೇರಿ ರಸ್ತೆಯಲ್ಲಿರುವ ಮುಖ್ಯ ಪ್ರಾಣ ಮೊಬೈಲ್ ಶಾಪ್ ನಲ್ಲಿ ರವಿವಾರ ಬಂದಿದ್ದ ಇಬ್ಬರು ಬಾಲಕರು ಮೊಬೈಲ್ ಕವರ ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಅಂಗಡಿಯಲ್ಲಿದ್ದ ರಿಯಲ್ ಮಿ ಸಿ-35 ಮೊಬೈಲ್ ಫೊನ್ -1, ಅಂದಾಜು ಬೆಲೆ 14,000, ಜಿಯೊ ಡೊಂಗಲ್ ಅಂದಾಜು ಬೆಲೆ 4,900, ಕದ್ದು ಪರಾರಿಯಾಗಿದ್ದರು ಎನ್ನಲಾಗಿದೆ. ಈ ದೃಶ್ಯಗಳು ಮೊಬೈಲ್ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top