ಕಾರವಾರ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಶ್ರೀಮತಿ ಸುಮತಿ ಧಾಮ್ಲೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಮಹತ್ತರ ಸಾಧನೆಯನ್ನು ಸಾಧಿಸಿ ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.
ಬಾಲಕಿಯರ ಸ್ಪರ್ಧೆಯಲ್ಲಿ ಸೌಂದರ್ಯ ಕೆ.ಮಾಂಗ್ಲಿ ಗುಂಡು ಮತ್ತು ಚಕ್ರ ಎಸೆತದಲ್ಲಿ ಪ್ರಥಮ, ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಮಾರ್ಟಿನ್ ಸಿದ್ದಿ ಗುಂಡು ಎಸೆತದಲ್ಲಿ ದ್ವಿತೀಯ ಹಾಗೂ ಪೂರ್ಣಿಮಾ ಬಡಂಗಿ 1500 ಮೀ. ಓಟದಲ್ಲಿ ಪ್ರಥಮ ಮತ್ತು 800 ಮೀ. ಓಟದಲ್ಲಿ ದ್ವಿತೀಯ ಹಾಗೂ ಅಕ್ಷತಾ ಅಂಕಲಗಿ 300 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕಾ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ.
ಪ್ರಿಯಾ ಭಾಮೇಕರ್ 400 ಮೀಟರ್ ಓಟದಲ್ಲಿ ತೃತೀಯ, ರಂಜಿತಾ ಭದ್ರಿ ಕಾಲ್ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದರೆ, ಬಾಲಕ ಹಾಗೂ ಬಾಲಕಿಯರ ಕಬ್ಬಡಿ ತಂಡ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಇವರ ಈ ಸಾಧನೆಗೆ ತರಬೇತಿ ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ರಾಣೆ ಅವರಿಗೆ ಹಾಗೂ ಸಹಕರಿಸಿದ ಟೋನಿ ಅರುಣ, ಸಂಕೇತ, ಶಿಕ್ಷಕರಾದ ಕುಮಾರ ಪೂಜಾರ, ಶಿವಾನಂದ ಬಡಿಗೇರ ಅವರಿಗೆ ಹಾಗೂ ಬಿಇಡಿ ಪ್ರಶಿಕ್ಷಣಾರ್ಥಿಗಳಾದ ಬಸವರಾಜ, ತೇಜೇಶ್‌ಕುಮಾರ ಲಮಾಣಿ, ಗೈಬಿಸಾಬ್ ಶೇಖ್ ಅವರಿಗೆ ಹಾಗೂ ಎಲ್ಲಾ ಸಾಧನೆಗೈದ ಕ್ರೀಡಾಪಟುಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಶುಭಲತಾ ಅಸ್ನೋಟಿಕರ, ಪದಾಧಿಕಾರಿಗಳು, ಮುಖ್ಯಾಧ್ಯಾಪಕ ಎ.ಎಮ್.ಮಣಿ, ಶಿಕ್ಷಕ- ಶಿಕ್ಷಕಿಯರು, ಶಾಲಾ ಸಿಬ್ಬಂದಿ, ಗೀತಾ ಸಾಲಸ್ಕರ್, ಬದುಕು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ(ರಿ) ಸಂಸ್ಥೆಯ ಪದಾಧಿಕಾರಿಗಳು ಹಾಗೂ ನಗರಸಭೆಯ ಸ್ಥಳೀಯ ಸದಸ್ಯ ಪ್ರೇಮಾನಂದ ಗುನಗಾ ಅಭಿನಂದಿಸಿ ಮುಂದಿನ ಕ್ರೀಡೆಗಳಿಗೆ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದ್ದಾರೆ.
ಪ್ರೌಢಶಾಲಾ ಕ್ರೀಡಾಕೂಟ: ಸರಸ್ವತಿ ವಿದ್ಯಾಲಯದ ಸಾಧನೆ
