ಶಿರಸಿ: ನಗರದ ಟಿಎಂಎಸ್ ಸಭಾಭವನದಲ್ಲಿ ಸೆ.16, 17, 18 ರಂದು 3 ದಿನಗಳ ಕಾಲ ಆಜಾದಿ ಕಾ ಅಮೃತ ಮಹೋತ್ಸವದ ವರ್ಷಾಚರಣೆಯ ಪ್ರಯುಕ್ತ ‘ಮಿಲೇ ಸುರ್ ಮೇರಾ ತುಮ್ಹಾರಾ’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸೆ.16 ಶುಕ್ರವಾರ ಸಂಜೆ 5ಕ್ಕೆ ರೇಖಾ ದಿನೇಶರವರ ನೇತೃತ್ವದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಹಾಗೂ ನರ್ತನ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಯಕ್ಷಗಾನ ರೂಪಕ ‘ರಾಮಾನು ಸಂಧಾನ’ ಅಭಿಜ್ಞಾ ಹೆಗಡೆ ಹಾಗೂ ಮೈತ್ರಿ ಕಡಕೋಡ ಇವರುಗಳು ನಡೆಸಿಕೊಡುವರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋ॥ ಗಣೇಶ ಹೆಗಡೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ರಮಾನಂದ ಐನಕೈ ಮುಖ್ಯ ಅತಿಥಿಗಳಾಗಿ ರವಿ ಶಂಕರ್ ಭಟ್ ಪಾಲ್ಗೊಳ್ಳಲಿದ್ದಾರೆ.
ಸೆ.17 ಶನಿವಾರ ಸಂಜೆ 5 ಘಂಟೆಗೆ ಗಾಯನದಲ್ಲಿ ಅಶೋಕ್ ನಾಡಿಗೇರ್ ಹುಬ್ಬಳ್ಳಿ ತಬಲಾದಲ್ಲಿ ಡಾ.ಶ್ರೀಹರಿ ದಿಗ್ಗಾವಿ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಪಾಲ್ಗೊಳ್ಳುವರು. ಕೆರೆಕೈ ಹಾಗೂ ಹಳದೋಟ ಸಂಗಡಿಗರ ‘ಭಕ್ತಿ ಸಂಗಮ’ಕ್ಕೆ ತಬಲಾದಲ್ಲಿ ಕಿರಣ್ ಹೆಗಡೆ ಹಾರ್ಮೋನಿಯಂನಲ್ಲಿ ಧೀರಜ್ ಕುಮಾರ್ ಸಾಥ್ ನೀಡಲಿದ್ದಾರೆ.ಪಂ. ರಾಜೇಂದ್ರ ಕುಲಕರ್ಣಿ ಪುಣಾ ಕೊಳಲು ವಾದನ, ಪಂ. ಪ್ರಮೋದ್ ಗಾಯಕ್ವಾಡ್ ಪುಣಾ ಶೆಹನಾಯ್, ತಬಲಾ ಪಂ ವಿನಾಯಕ ಗುರವ ಪುಣಾ ಇವರ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿವೆ.
ಭಾನುವಾರ ಸೆಪ್ಟೆಂಬರ್ 18, ಸಂಜೆ 5 ರಿಂದ ಸಂತೋಷ ಘಂಟೆ ಪುಣಾ ಇವರಿಂದ ಹಾರ್ಮೋನಿಯಂ ಸೋಲೋ, ತಬಲಾ ವಿನಾಯಕ ಗುರವ ಹಾಗೂ ಸಿತಾರ್ ಜುಗಲ್ ಬಂದಿ ಕಾರ್ಯಕ್ರಮವನ್ನು ಉಸ್ತಾದ್ ರಫೀಕ್ ಖಾನ್ ಮಂಗಳೂರು, ಉಸ್ತಾದ್ ಶಫೀಕ್ ಖಾನ್ ಧಾರವಾಡ, ತಬಲಾದಲ್ಲಿ ಡಾ॥ ಉದಯ ಕುಲಕರ್ಣಿ ನಡೆಸಿಕೊಡಲಿದ್ದಾರೆ.ಕಾರ್ಯಕ್ರಮದ ಕೊನೆಯಲ್ಲಿ ಗಾಯನ ಕಾರ್ಯಕ್ರಮದಲ್ಲಿ ಪಂ.ಸಂಜಯ್ ಗರುಡ್ ಪೂಣಾ, ತಬಲಾದಲ್ಲಿ ವಿನಾಯಕ್ ಗುರವ್ ಹಾರ್ಮೋನಿಯಂ ಸಂತೋಷ್ ಘಂಟೆ ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಜನನಿ ಸಂಸ್ಥೆಯ ಕಾರ್ಯದರ್ಶಿ ದಿನೇಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.