• Slide
    Slide
    Slide
    previous arrow
    next arrow
  • ಹದಗೆಟ್ಟ ನರಮುಂಡಿಗೆ ರಸ್ತೆ: ದುರಸ್ತಿಗಿಳಿದ ಸ್ಥಳೀಯ ಯುವಕರು

    300x250 AD

    ಸಿದ್ದಾಪುರ: ತಾಲೂಕಿನ ನರಮುಂಡಿಗೆ ರಸ್ತೆ ಹಾಳಾಗಿದ್ದು, ಸ್ಥಳೀಯ ಯುವಕರೇ ಮಳೆಯಲ್ಲಿ ಸರಿಪಡಿಸಿಕೊಂಡಿದ್ದಾರೆ.

    ಕೊಡಗಿಬೈಲ್ ಕ್ರಾಸ್‌ನಿಂದ ನರಮುಂಡಿಗೆ ಸಂಪರ್ಕ ರಸ್ತೆ ಹದಗೆಟ್ಟಿದ್ದು ಓಡಾಡಲೂ ಅಯೋಗ್ಯವಾಗಿದೆ. ಕಳೆದ ಸಾಲಿನಲ್ಲಿ ಒಂದೂವರೆ ಕಿಲೋಮೀಟರ್ ಕಡೀಕರಣವಾಗಿದೆ. ರಸ್ತೆಯ ಮೇಲೆ ನೀರು ಹರಿಯುವುದರಿಂದ ರಸ್ತೆ ಚರಂಡಿಯಂತೆ ಆಗಿದ್ದು, ಓಡಾಡಲು ಕಷ್ಟಪಡುವಂತಾಗಿದೆ. ವಾಹನ ಸವಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುತ್ತಾ ಚಲಿಸಬೇಕಾಗುತ್ತದೆ.

    ಇದನ್ನರಿತ ನರಮುಂಡಿಗೆಯ ಕೆಲವು ಯುವಕರು ತಾವೇ ರಸ್ತೆ ರಿಪೇರಿಗೆ ಮುಂದಾಗಿದ್ದಾರೆ. ಹೊಂಡ ಮುಚ್ಚಿ, ರಸ್ತೆಯ ಮೇಲೆ ಹರಿಯುವ ನೀರನ್ನು ಚರಂಡಿಗೆ ಬೀಳುವಂತೆ ಮಾಡಿದ್ದಾರೆ. ಮಣ್ಣು ಕೊಚ್ಚಿ ಹೋದ ಕಡೆಗಳಲ್ಲಿ ಮಣ್ಣು ಹಾಕಿ ಸರಿಪಡಿಸಿದ್ದಾರೆ. ಇಲ್ಲಿ ಸರ್ವಋತು ರಸ್ತೆ ಅವಶ್ಯಕತೆಯಿದ್ದು, ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ಆಗದಿರುವುದು ಇಲ್ಲಿಯ ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿದೆ.

    300x250 AD

    ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮಗೆ ಒಂದು ಮೂಲಭೂತ ಸೌಕರ್ಯವಾದ ರಸ್ತೆ ಇಲ್ಲ ಎನ್ನುವುದು ಸ್ಥಳೀಯರ ಅಳಲಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

    ರಸ್ತೆ ರಿಪೇರಿಯಲ್ಲಿ ಈಶ್ವರ ನಾಯ್ಕ, ಜಯರಾಮ್ ನಾಯ್ಕ, ರಜನಿಕಾಂತ್ ನಾಯ್ಕ, ವಿಜಯಕುಮಾರ್ ನಾಯ್ಕ, ಲೋಕೇಶ್ ನಾಯ್ಕ, ಗಜು ನಾಯ್ಕ, ಪ್ರಜ್ವಲ್ ನಾಯ್ಕ ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top