• Slide
    Slide
    Slide
    previous arrow
    next arrow
  • ಧಾರೇಶ್ವರದಲ್ಲಿ ದಿನಕರ ದೇಸಾಯಿ ಜನ್ಮದಿನಾಚರಣೆ

    300x250 AD

    ಕುಮಟಾ: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜನತಾ ವಿದ್ಯಾಲಯ ಧಾರೇಶ್ವರದ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದಿನಕರ ದೇಸಾಯಿ ಜನ್ಮ ದಿನಾಚರಣೆ ಕಾರ್ಯಕ್ರಮ ತಾಲೂಕಿನ ಧಾರೇಶ್ವರ ಪ್ರೌಢಶಾಲೆಯಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಕವಿ ಬೀರಣ್ಣ ನಾಯಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಚೌಪದಿ ಮತ್ತು ಕವನ ರಚನೆಯ ವಿನ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಮೂಲಮಂತ್ರ ತಿಳಿಸಿದರು.

    ಮುಖ್ಯ ಅತಿಥಿಯಾ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಮತ್ತು ಬರಹಗಾರ ಎನ್.ಆರ್.ಗಜು ಮಾತನಾಡಿ, ಜೀವನವನ್ನೇ ಅದ್ಭುತ ಕಾವ್ಯವನ್ನಾಗಿಸಿಕೊಂಡ ದಿನಕರರ ಬದುಕು ಮತ್ತು ಬರಹದ ಕುರಿತು ಉಪನ್ಯಾಸ ನೀಡುತ್ತಾ, ಉತ್ತರ ಕನ್ನಡಕ್ಕೆ ಬೆಳಕು ಬಿತ್ತಿದ ದಿನಕರರ ನಿತ್ಯಸ್ಮರಣೆ ಮಾಡುತ್ತಿರುವ ವೆಲ್‌ಫೇರ್ ಟ್ರಸ್ಟಿನ ಅದ್ವಿತೀಯ ಕಾರ್ಯ ಶ್ಲಾಘಿಸಿದರು. ಇಂದು ಇಡೀ ರಾಜ್ಯ ಜನ್ಮದಿನೋತ್ಸವವನ್ನು ಆಚರಿಸುವ ಅಗತ್ಯವಿರುವುದನ್ನು ಮನಗಾಣಬೇಕಿದೆ ಎಂದರಲ್ಲದೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ದೇಸಾಯಿಯಂತಹ ಧೀರೋದ್ಧಾತ ದಿಟ್ಟತನ ತೋರುವ ವ್ಯಕ್ತಿ ಉದ್ಭವಿಸಬೇಕಾಗಿದ್ದಾರೆ ಎಂದರು.

    300x250 AD

    ಕೆನರಾ ವೆಲ್‌ಫೇರ್ ಟ್ರಸ್ಟಿನ ಕಾರ್ಯದರ್ಶಿ ಕೃಷ್ಣಾನಂದ ವಿ.ಶೆಟ್ಟಿ ಮಾತನಾಡಿ, ತಮ್ಮ ಮತ್ತು ದಿನಕರ ದೇಸಾಯಿಯವರ ನಡುವಿನ ಒಡನಾಟವನ್ನು ಸ್ಮರಿಸುತ್ತಾ, ದಿನಕರರ ತಪಸ್ಸಿನಂತಹ ಕರ್ತತ್ವ ಶಕ್ತಿಯ ನಿಜದರ್ಶನಗೈದರು.

    ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಮಾತನಾಡಿ, ಕಸಾಪ ದಿನಕರರ ಸ್ಮರಣೆಯಲ್ಲಿ ಭಾಗಿಯಾಗಿ ತನ್ನ ಗೌರವ ಕಸಾಪ ಹೆಚ್ಚಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು. ದಿನಕರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಗೋಪಿ ಸಂಜೀವ ಭಜಂತ್ರಿ ಸ್ವಾಗತಿಸಿದರು. ಕಸಾಪ ಸದಸ್ಯ ಹಾಗೂ ಶಿಕ್ಷಕ ಯೋಗೇಶ್ ಪಟಗಾರ ನಿರೂಪಿಸಿದರು. ಶಿಕ್ಷಕಿ ಪ್ರತಿಭಾ ಭಾಗ್ವತ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ದಿನಕರ ದೇಸಾಯಿ ವ್ಯಕ್ತಿ ಚಿತ್ರಣ ಹಾಗೂ ಚುಟುಕು ರಚನಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಪ್ರೊ. ವನ್ನಳ್ಳಿ ಗಿರಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ ಶಾನಭಾಗ, ಸದಸ್ಯರಾದ ನಾಗರಾಜ ಶೇಟ್, ಜಯರಾಮ ಭಟ್ಟ, ಮೋಹನ್ ಶಾನಭಾಗ ಇತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top