ಶಿರಸಿ; ಬನವಾಸಿ ಹೋಬಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಬದನಗೋಡ ಹಾಗೂ ಅಂಡಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿಕೆ ಬೆಳೆಯು ಅಪಾರ ಹಾನಿಗೊಳಗಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯು ಉದುರುತ್ತಿದ್ದು ರೈತರು ಆತಂಕಕ್ಕೊಳಗಾಗಿದ್ದಾರೆ. ಇನ್ನೂ ಇದೇ ರೀತಿ ಮಳೆ ಮುಂದುವರಿದಲ್ಲಿ ಪೂರ್ಣ ಪ್ರಮಾಣದ ಅಡಿಕೆ ಬೆಳೆ ನಾಶವಾಗಿ ರೈತರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಡಬಹುದು ಆದ್ದರಿಂದ ರೈತರ ಅಡಿಕೆ ಬೆಳೆ ಸಂಪೂರ್ಣವಾಗಿ ನಾಶವಾಗುವ ಮೊದಲೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ತಾಲೂಕಿನ ದಾಸನಕೊಪ್ಪದ ಕಾಳಂಗಿ ಸೇವಾ ಸಹಕಾರಿ ಸಂಘವು ಸಮಸ್ತ ರೈತರ ಪರವಾಗಿ ಮನವಿ ನೀಡಿದೆ .
ಭಾರಿ ಮಳೆಯಿಂದಾಗಿ ಅಡಿಕೆ ಬೆಳೆ ನಾಶ: ಸೂಕ್ತ ಪರಿಹಾರಕ್ಕಾಗಿ ಮನವಿ
