• Slide
    Slide
    Slide
    previous arrow
    next arrow
  • ಬ್ಯೂಟಿ ಪಾರ್ಲರ್’ಲ್ಲಿ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು

    300x250 AD

    ಅಂಕೋಲಾ: ಪಟ್ಟಣದ ಬ್ಯೂಟಿ ಪಾರ್ಲರ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಪಾರ್ಲರ್‌ನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
    ಅಂಬಾರಕೋಡ್ಲ ರಸ್ತೆಯಲ್ಲಿರುವ ಕಾಂಪ್ಲೆಕ್ಸ್ನ ಮೇಲ್ಮಹಡಿಯಲ್ಲಿದ್ದ ಬ್ಯೂಟಿ ಪಾರ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಕಂಡುಬಂದಿತ್ತು. ಪಾರ್ಲರ್ ಮಾಲಕರು ಮಧ್ಯಾಹ್ನದ ವೇಳೆ ಪಾರ್ಲರ್ ಬಂದ್ ಮಾಡಿ ಊಟಕ್ಕೆ ಮನೆಗೆ ಹೋದ ಸಂದರ್ಭದಲ್ಲಿ ಈ ಬೆಂಕಿ ಅವಘಡ ನಡೆದಿದೆ.
    ಬ್ಯೂಟಿ ಪಾರ್ಲರ್‌ನಿಂದ ಹೊರಗಡೆ ಹೊಗೆ ಬರುತ್ತಿರುವುದನ್ನು ಪಕ್ಕದ ಕಾಂಪ್ಲೆಕ್ಸ್ ಬಳಿ ಇದ್ದ ಓರ್ವ ಯುವಕ ಗಮನಿಸಿ, ಸಂಬಂಧಿಸಿದವರಿಗೆ ವಿಷಯ ತಲುಪಿಸಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದರು. ಬೆಂಕಿಯ ಅವಘಡಕ್ಕೆ ಪಾರ್ಲರ್ ಒಳಗಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿದೆ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top