• Slide
    Slide
    Slide
    previous arrow
    next arrow
  • ನಾರಾಯಣಗುರುಗಳ ಚಿಂತನೆ ಇಂದಿಗೂ ಪ್ರಸ್ತುತ: ಕೆ.ಜಿ.ನಾಯ್ಕ

    300x250 AD

    ಸಿದ್ದಾಪುರ: ಸಮಾಜದಲ್ಲಿ ಇಂದಿಗೂ ಹಿಂದುಳಿದ ವರ್ಗದವರನ್ನು ಅತ್ಯಂತ ವ್ಯವಸ್ಥಿತವಾಗಿ ತುಳಿಯುವ ಕೆಲಸ ನಡೆಯುತ್ತದೆ. ಅದು ಎಲ್ಲಾ ಕ್ಷೇತ್ರದಲ್ಲಿಯೂ ನಾವು ಕಾಣುತ್ತಿದ್ದೇವೆ. ಆದರೆ ಅಂದು ನಾರಾಯಣಗುರುಗಳು ಶೋಷಿತವಾದ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯವನ್ನು ತಂದುಕೊಡುವಲ್ಲಿ ಬಹಳ ಶ್ರಮಿಸಿದ್ದರು. ಅವರ ಸಮಾನತೆಯ ಹಾಗೂ ಇತರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಾಲೂಕ ನಾಮಧಾರಿ ಸಮಾಜದವರ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದರು.
    ಅವರು ಪಟ್ಟಣದ ಆಡಳಿತಸೌಧದ ಸಭಾಭವನದಲ್ಲಿ ತಾಲೂಕ ಆಡಳಿತ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
    ಹಿರಿಯ ವಕೀಲ ಶ್ರೀಸಂಸ್ಥಾನ ತರಳಿಮಠದ ಅಧ್ಯಕ್ಷ ಎನ್.ಡಿ.ನಾಯ್ಕ ಐಸೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾರಾಯಣಗುರುಗಳು ಶಿಕ್ಷಣದಲ್ಲಿ ಮಹತ್ವದ ಕ್ರಾಂತಿಯನ್ನು ಮಾಡಿದ್ದಾರೆ. ಶಿಕ್ಷಣದಿಂದ ಸ್ವತಂತ್ರರಾಗಿ ಸಂಘಟನೆಯಿಂದ ಶಕ್ತಿಯುತರಾಗಿ ಎನ್ನುವ ಸಂದೇಶ ಸಾರಿದ್ದಾರೆ ಎಂದರು.
    ತಾಲೂಕು ನಾಮಧಾರಿ ಸಮಾಜದವರ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ, ಬಿಎಸ್‌ಎನ್‌ಡಿಪಿ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ ದೊಡ್ಡಗದ್ದೆ ಮೊದಲಾದವರು ಮಾತನಾಡಿದರು. ಪತ್ರಕರ್ತ ಕನ್ನೇಶ ನಾಯ್ಕ ಕೋಲಶಿರ್ಸಿ ಉಪನ್ಯಾಸ ನೀಡಿದರು.
    ಇದೇ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ, ಸಾಹಿತ್ಯಿಕ, ಕಲೆ ಮೊದಲಾದ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವ ಬಿ.ಆರ್.ನಾಯ್ಕ ಹೆಗ್ಗಾರಕೈ, ನಂದನ ನಾಯ್ಕ, ಎನ್.ಡಿ.ನಾಯ್ಕ, ಎಂ.ವಿಠ್ಠಲ ಅವರಗುಪ್ಪ, ಮಮತಾ ನಾಯ್ಕ, ಕೃಷ್ಣಾ ಜಿ.ನಾಯ್ಕ ಬೇಡ್ಕಣಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ತಹಶೀಲ್ದಾರ ಸಂತೋಷ ಭಂಡಾರಿ, ತಾಲೂಕ ನಾಮಧಾರಿ ಸಮಾಜದವರ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಆನಂದ ಆಯ್.ನಾಯ್ಕ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾಯ್ಕ, ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ ವಿ.ನಾಯ್ಕ ಜಾತಿಕಟ್ಟಾ, ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಸಿ.ಆರ್.ನಾಯ್ಕ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಸಂತ ಎಲ್. ನಾಯ್ಕ ಮನ್ಮನೆ, ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್.ವಿನಾಯಕ, ಪ್ರಮುಖರಾದ ಏ.ಜಿ.ನಾಯ್ಕ ಕಡಕೇರಿ, ಗಾಂಧಿಜಿ ಆರ್.ನಾಯ್ಕ, ಅರುಣ ನಾಯ್ಕ ಬಣಗಾರ, ಗಣೇಶ ಎಲ್.ನಾಯ್ಕ ಮನ್ಮನೆ, ಪ್ರಶಾಂತ ನಾಯ್ಕ ಹೊಸೂರು ಮೊದಲಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top