Slide
Slide
Slide
previous arrow
next arrow

ಮನಸೆಳೆದ ನೃತ್ಯ ನಾದ ಮಹೋತ್ಸವ

300x250 AD

ಶಿರಸಿ: ನೃತ್ಯ ನಾದ ಮಹೋತ್ಸವವು ನಗರದ ಮಾರ್ಕೆಟ್ ಯಾರ್ಡ ಟಿ ಆರ್.ಸಿ ಬ್ಯಾಂಕ್ ಸಭಾಭವನದಲ್ಲಿ ಬೆಂಗಳೂರು ನೃತ್ಯ ನಾದ ಫೌಂಡೇಶನ್, ಪಂ ಶ್ರೀಪಾದ ರಾವ್ ಕಲ್ಲುಂಡಿಕೊಪ್ಪ ಫೌಂಡೇಶನ್ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೃತ್ಯ-ನಾದ ಕಾರ್ಯಕ್ರಮ ಯಶಸ್ವಿಯಾಗಿ ಜನಮನ ತಲುಪಿತು.

ಕೆ.ಡಿ.ಸಿ.ಸಿ ಬ್ಯಾಂಕ್ ಹಾಗೂ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಲ್ಲುಂಡಿಕೊಪ್ಪ  ತಬಲಾವಾದಕ ಲಕ್ಷೀಶ ರಾವ್ ಕಲ್ಲುಂಡಿಕೊಪ್ಪ ಹಾಗೂ ಸಾಮಾಜಿಕ ಕಾರ್ಯಕರ್ತೆ ಮಮತಾ ಹೆಗಡೆ ಮತ್ತು ನಟರಾಜ ನೃತ್ಯಶಾಲೆಯ ನೃತ್ಯಗುರು ವಿದುಷಿ ಸೀಮಾ ಭಾಗ್ವತ್ ಉಪಸ್ಥಿತರಿದ್ದರು.

ನಂತರದಲ್ಲಿ  ನಡೆದ ನಾದ ಕಾರ್ಯಕ್ರಮದಲ್ಲಿ ಕರ್ನಾಟಕೀಯ ಸಂಗೀತದ ಖ್ಯಾತ ಕಲಾವಿದರು ತಮ್ಮ ವಾದನ ವೈವಿಧ್ಯತೆಯನ್ನು ಪ್ರದರ್ಶಿಸಿದರು.

300x250 AD

ಕೊಳಲುವಾದಕ ವಿದ್ವಾನ್ ದೀಪಕ ಹೆಬ್ಬಾರ್ ಬೆಂಗಳೂರು ಜೊತೆಯಲ್ಲಿ ವೈಲಿನ್ ವಾದನದಲ್ಲಿ ವಿದ್ವಾನ್ ಜನಾರ್ಧನ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಆನೂರು ವಿನೋದ ಶ್ಯಾಮ್ ಮತ್ತು ಘಟಂ ನಲ್ಲಿ ಶ್ರೀನಿಧಿ ಕೌಂಡಿನ್ಯ ಭಾಗವಹಿಸಿ ಕಲಾಪ್ರದರ್ಶನಕ್ಕೆ ಮೆರಗು ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಕಲಾವಿದರನ್ನು ತಬಲಾ ವಾದಕ ಲಕ್ಷ್ಮೀಶ ರಾವ್ ಕಲ್ಲುಂಡಿಕೊಪ್ಪ  ಗೌರವಿಸಿದರು.

ನಂತರ ನಡೆದ ನೃತ್ಯ ವಿಭಾಗದಲ್ಲಿ ‘ದಾನಶೂರ ಕರ್ಣ’ ಎಂಬ ಭರತನಾಟ್ಯ ನೃತ್ಯ ರೂಪಕ ಸೊಗಸಾಗಿ ಮೂಡಿ ಬಂದಿತು. ರೂಪಕದಲ್ಲಿ ಕರ್ಣನಾಗಿ ವಿದೂಷಿ ದೀಪ ಭಾಗ್ವತ್,  ಕುಂತಿ ಪಾತ್ರದಲ್ಲಿ ವಿದೂಷಿ ಸೀಮಾ ಭಾಗ್ವತ್, ಕೃಷ್ಣ ನಾಗಿ ವಿದೂಷಿ ಶಮಾ ಹಿರೇಗಂಗಾ ಗೋಕರ್ಣ ಪಾಲ್ಗೊಂಡರು. ನೃತ್ಯ ರೂಪಕದಲ್ಲಿ ಸಹ ಕಲಾವಿದರಾಗಿ ಶಿರಸಿ ನಟರಾನೃತ್ಯ ಶಾಲೆಯ ವಿದ್ಯಾರ್ಥಿಗಳಾದ ಅನಘಾ ಹೆಗಡೆ, ಅಮೃತ ಪೈ, ಖುಷಿ ರಾಜೋಟಿ, ದೀಪಾ ನಾಯ್ಕ್, ಶರಧಿ ಹೆಗಡೆ, ವೈಷ್ಣವಿ ತಂತ್ರಿ, ಸ್ತುತಿ ಹೆಗಡೆ, ಶ್ರೇಯ ಹೆಗಡೆ, ನಚಿಕೇತ್ ಹೆಗಡೆ, ಕೀರ್ತಿ ಭಾಗವಹಿಸಿದ್ದರು. ದಾನಶೂರಕರ್ಣ ರೂಪಕದ ಸಾಹಿತ್ಯವನ್ನು ಪ್ರದೀಪ್ ಭಾಗ್ವತ್ ರಚಿಸಿದರೆ ಹಿನ್ನೆಲೆಯ ಸುಂದರ ಸಂಗೀತ ಸಂಯೋಜನೆ ವಿದ್ವಾನ್ ದೀಪಕ್ ಹೆಬ್ಬಾರ್ ನೆರವೇರಿಸಿದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ , ನಿರೂಪಿಸಿದರು.

Share This
300x250 AD
300x250 AD
300x250 AD
Back to top