Slide
Slide
Slide
previous arrow
next arrow

ದೀಪಾವಳಿಯಿಂದ ಟಿಎಸ್ ಎಸ್’ನಲ್ಲಿ ಪೂರ್ಣ ಪ್ರಮಾಣದ ಕಾರ್ಡಿಯಾಲಾಜಿಸ್ಟ್ ಲಭ್ಯ: ಡಾ. ಶಶಿಕುಮಾರ

300x250 AD

ಶಿರಸಿ: ಹೃದಯಾಘಾತ ಆದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಸಮಯದ ಅಭಾವ ಇರುತ್ತದೆ. ಸ್ಥಳೀಯವಾಗಿಯೇ ಚಿಕಿತ್ಸೆಯ ಅಗತ್ಯತೆ ಇರುವುದರಿಂದ ಟಿಎಸ್ ಎಸ್ ಆಸ್ಪತ್ರೆಯಲ್ಲಿ ದೀಪಾವಳಿಯಿಂದ ಪೂರ್ಣ ಪ್ರಮಾಣದ ಕಾರ್ಡಿಯಾಲಾಜಿಸ್ಟ್ ಲಭ್ಯವಾಗುವಂತೆ ಮಾಡಲಾಗುವುದು ಎಂದು ನಾರಾಯಣ ಹೃದಯಾಲಯದ ಡಾ. ಶಶಿಕುಮಾರ ಹೇಳಿದರು.
ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಟಿ. ಎಸ್. ಎಸ್. ಆಸ್ಪತ್ರೆ ದಿನದಿಂದ ದಿನಕ್ಕೆ ಉತ್ತಮ ಸೇವೆ ನೀಡುತ್ತಿದೆ. ಸ್ಪೆಷಾಲಿಟಿ ಚಿಕಿತ್ಸೆಗಳನ್ನು ಸ್ಥಳೀಯವಾಗಿ ಒದಗಿಸುತ್ತಾ ಬಂದಿರುವ ಆಸ್ಪತ್ರೆಯು ಇತ್ತೀಚಿನ ದಿನಗಳಲ್ಲಿ ಹೃದಯರೋಗ ಚಿಕಿತ್ಸಾ ವಿಭಾಗವನ್ನು ಆರಂಭಿಸಿದೆ. ಚಿಕಿತ್ಸಾ ಗುಣಮಟ್ಟವನ್ನು ಕಾಯ್ದುಕೊಂಡು ಬರಲು ಹಾಗೂ ನುರಿತ ಚಿಕಿತ್ಸಕರಿಂದ ಚಿಕಿತ್ಸೆ ಒದಗಿಸುವಲ್ಲಿ ದೇಶದಲ್ಲೇ ಹೃದಯರೋಗಕ್ಕೆ ಮನೆಮಾತಾಗಿರುವ “ನಾರಾಯಣ ಹೆಲ್ತ್” ಇವರ ಅಂಗ ಸಂಸ್ಥೆಯಾದ “SDM ನಾರಾಯಣ ಹಾರ್ಟ್ ಸೆಂಟರ್” ಧಾರವಾಡ ಇವರ ವೈದ್ಯಕೀಯ ಸಹಯೋಗದೊಂದಿಗೆ 3 ತಿಂಗಳುಗಳಿಂದ ಹೃದಯ ರೋಗಕ್ಕೆ ತುತ್ತಾದವರಿಗೆ ಯಶಸ್ವಿಯಾಗಿ ಎಂಜಿಯೋಗ್ರಾಮ್, ಎಂಜಿಯೋಪ್ಲಾಸ್ಟಿ, ಹೋಲ್ಡರ್, 2D ಇಕ್ಟೋ, TMT ಸೇವೆಗಳನ್ನು ಒದಗಿಸುತ್ತಿದೆ.
ಹಿಂದಿನ ಎರಡು ತಿಂಗಳುಗಳಲ್ಲಿ 38 ರೋಗಿಗಳಿಗೆ ಎಂಜಿಯೋಗ್ರಾಮ್ ಹಾಗೂ ಅಗತ್ಯತೆ ಇದ್ದ ರೋಗಿಗಳಿಗೆ ಎಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ಒದಗಿಸಿದೆ. ಕೆಲವು ಅಗತ್ಯತೆ ಇದ್ದ ರೋಗಿಗಳಿಗೆ ಹೋಲ್ಟರ್ ಅಳವಡಿಸಿ ರೋಗಿಯ
ಹೃದಯದ ಸ್ಥಿತಿಯನ್ನು ಕೂಡ ಪರಿಶೀಲಿಸಲಾಗಿದೆ. ಹಿಂದಿನ 3 ತಿಂಗಳನಲ್ಲಿ 500ಕ್ಕೂ ಹೆಚ್ಚು ರೋಗಿಗಳಿಗೆ 2D ಇಸ್ರೋ ಸೇವೆಯನ್ನು ಒದಗಿಸಿಕೊಟ್ಟಿದೆ ಎಂದರು.
ರೋಗಿಗಳು ಹೃದಯ ರೋಗ ಚಿಕಿತ್ಸೆಗಾಗಿ ಪರಊರಿಗೆ ತೆರಳುವುದರ ಬದಲು ಸ್ಥಳೀಯವಾಗಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ದೊಡ್ಡ ಪಟ್ಟಣಗಳಾದ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಗೆ ಹೋಲಿಸಿದಲ್ಲಿ ಚಿಕಿತ್ಸಾ ವೆಚ್ಚ ಕೂಡ ಗಣನೀಯವಾಗಿ ಕಡಿಮೆಯಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ತುರ್ತು ಸಮಯದಲ್ಲಿ
ಸ್ಥಳೀಯವಾಗಿ ಚಿಕಿತ್ಸೆ ದೊರೆಯುವುದರಿಂದ ಅಮೂಲ್ಯವಾದ ಪ್ರಾಣವನ್ನು ಉಳಿಸಬಹುದಾಗಿದೆ. ಇದೀಗ ವಾರದಲ್ಲಿ 2 ದಿನ ಲಭ್ಯವಿರುವ ಎಂಜಿಯೋಗ್ರಾಮ್ ಮತ್ತು ಎಂಜಿಯೋಪ್ಲಾಸ್ಟಿ, ಹೋಲ್ಟರ್ ಸೇವೆಗಳು ಮುಂಬರುವ ದಿನಗಳಲ್ಲಿ
ಪೂರ್ಣಾವಧಿ ಸೇವೆಗಳಾಗಲಿದ್ದು ಹೃದಯರೋಗ ತಜ್ಞರೂ ಸಹ ಪೂರ್ಣಾವಧಿ ಸೇವೆಗೆ ಲಭ್ಯಲಿರಲಿದ್ದಾರೆ ಎಂದರು.
ಡಾ. ಮಂಜುನಾಥ ಪಂಡಿತ, ಡಾ. ವಿವೇಕಾನಂದ ಗಜಪತಿ, ಡಾ. ಜಿ ಬಿ ಕಾರಂತ, ಟಿಎಸ್ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ವೇದಾವತಿ ಹೆಗಡೆ, ಎಂ ವಿ ಜೋಶಿ, ರಘುನಂದನ ಹೆಗಡೆ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top