Slide
Slide
Slide
previous arrow
next arrow

ಸರಕಾರದ ಸ್ಪಂದನೆಯ ಕೊರತೆ: ಒಕ್ಕಲೆಬ್ಬಿಸುವ ಭೀತಿಯಲ್ಲಿ ಅರಣ್ಯ ಅತಿಕ್ರಮಣದಾರರು

300x250 AD

ಶಿರಸಿ: ರಾಜ್ಯದಲ್ಲಿಯೇ ಅರಣ್ಯವಾಸಿಗಳ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಹೆಜ್ಜೆಗಳು 32ನೇ ವಸಂತಕ್ಕೆ ಸಪ್ಟೆಂಬರ್ 13 ರಂದು ಪಾದಾರ್ಪಣೆ ಮಾಡುತ್ತಿದೆ. ಆದರೆ, ಸರಕಾರದ ಸ್ಫಂದನೆಯ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಒಕ್ಕಲೆಬ್ಬಿಸುವ ಭೀತಿಯಲ್ಲಿ ದಿನ ದೂಡುತ್ತಿರುವುದು ವಿಷಾದಕರ.

  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆ ಒಳಗೊಂಡ 16 ಜಿಲ್ಲೆಗಳಲ್ಲಿ ನಿರಂತರವಾಗಿ ಜರುಗಿದ ಅರಣ್ಯ ಭೂಮಿ ಹಕ್ಕು ಹೋರಾಟ, ಆಂದೋಲನ ರೂಪುಗೊಂಡಿದ್ದಾಗಿಯೂ ಸಮಸ್ಯೆ ಬಗೆಹರಿಯದಿರುವುದು ಖೇದಕರ.

  ಉತ್ತರ ಕನ್ನಡ ಜಿಲ್ಲೆಯ ಬೌಗೋಳಿಕ 10571ಚದರ್ ಕಿಲೋ ಮೀಟರ್ ನಲ್ಲಿ 8500ಚದರ್ ಕಿಲೋ ಮೀಟರ್ ಅರಣ್ಯದಿಂದ ಆವೃತ್ತವಾಗಿರುವ ಜಿಲ್ಲೆಯು ಭೌಗೋಳಿಕ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯಲ್ಲಿ ವಾಸಿಸಿರುವ ಸುಮಾರು 85000ಕುಟುಂಬವು ಜನಜೀವನಕ್ಕೆ ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಹಾಗೂ ಸಾಗುವಳಿಗೆಗೆ ಅವಲಂಭಿತರಾಗಿದ್ದಾರೆ. ಅರಣ್ಯ ಭೂಮಿ ಹಕ್ಕು ಅರ್ಜಿ ಸಲ್ಲಿಸಿದವರಲ್ಲಿ 2852ಅರ್ಜಿಗಳಿಗೆ ಮಾತ್ರ ಹಕ್ಕು ಪ್ರಾಪ್ತವಾಗಿದ್ದು, ಅವುಗಳಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೆ 394, ಪರಿಶಿಷ್ಟ ಪಂಗಡ 1331 ಹಾಗೂ ಸಮುದಾಯ ಉದ್ದೇಶಕ್ಕೆ 1127ಒಳಗೊಂಡಿದೆ.

300x250 AD

  ಹೋರಾಟಕ್ಕೆ ಕಾಗೋಡ ತಿಮ್ಮಪ್ಪ ಅವರ ಮಾರ್ಗದರ್ಶನ, ನಿವೃತ್ತ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್ ಎನ್ ನಾಗ ಮೋಹನದಾಸ ಅವರ ಕಾನೂನಾತ್ಮಕ ಬೆಂಬಲವು  ಸಂಘಟನಾತ್ಮಕ ಹೋರಾಟದ ಗಟ್ಟಿತನಕ್ಕೆ ಪ್ರಮುಖ ಶಕ್ತಿ ಎಂದರೆ ತಪ್ಪಾಗಲಾರದು. ಸರ್ವೋಚ್ಛ ನ್ಯಾಯಾಲಯ ನ್ಯೂಡೆಲ್ಲಿಯಲ್ಲೂ ಅರಣ್ಯವಾಸಿಗಳ ಪರವಾಗಿ ಸಮರ್ಥ ಕಾನೂನು ಹೋರಾಟದೊಂದಿಗೆ ಹಳ್ಳಿಯಿಂದ ಡೆಲ್ಲಿಯವರೆಗೂ 31 ವರ್ಷ ಹೋರಾಟ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಹೋರಾಟದ ಹೆಜ್ಜೆಯ ಪ್ರತೀಕವಾಗಿದೆ.

ವಿವಿಧ ರೀತಿಯ ಹೋರಾಟ : 3 ದಶಕದಲ್ಲಿ 5000 ಕ್ಕಿಂತ ಮಿಕ್ಕಿ ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಮತ್ತು ಜಾಗೃತೆ ಕಾರ್ಯಕ್ರಮವು 31 ವರ್ಷ ಹೋರಾಟದ ಮೈಲುಗಲ್ಲಾಗಿದೆ.

ಇಚ್ಛಾಶಕ್ತಿ ಕೊರತೆ :  ಜಿಲ್ಲೆಯ ಇತಿಹಾಸದಲ್ಲಿ ನಿರಂತರ, ಸತತ 30 ವರ್ಷದ ಹೋರಾಟದಲ್ಲಿ ಅರಣ್ಯ ವಾಸಿಗಳು ಹಕ್ಕಿನ ನೀರಿಕ್ಷೆಯಲ್ಲಿ ಅರಣ್ಯವಾಸಿ ಅತಿಕ್ರಮಣದಾರರು ಇದ್ದಾರೆ. ರಾಜಕೀಯ ಇಚ್ಛಾಶಕ್ತಿ, ಜನಪ್ರತಿನಿಧಿಗಳಿಗೆ ಕಾನೂನು ಅಜ್ಞಾನದ ಕೊರತೆಯಿಂದ ಅರಣ್ಯ ಭೂಮಿ ಮಂಜೂರಿಯಲ್ಲಿ ಹಿನ್ನೆಡೆಯಾಗಿದೆ ಎಂದು ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

Share This
300x250 AD
300x250 AD
300x250 AD
Back to top