ಕಾರವಾರ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಸೆ.30ರಿಂದ ಅ.2ರವರೆಗೆ ಮೂರು ದಿನಗಳ ಕಾಲ ಆಂದ್ರ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಬುಡಕಟ್ಟು ಸಮುದಾಯ ಎಂಬ ಮೂರು ದಿನಗಳ ರಾಷ್ಟ್ರೀಯ ಅಧ್ಯಯನ ಶಿಬಿರ ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ 20 ರಿಂದ 45 ವರ್ಷ ವಯಸ್ಸಿನೊಳಗಿನ ದೇಶದ ಎಲ್ಲಾ ಭಾಗದ ಕನ್ನಡ ಭಾಷೆಯನ್ನು ಬಲ್ಲ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ವೆಬ್‌ಸೈಟ್ http://www.//sahithyaacdemy.karnataka.gov.in ನ್ನು ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ಸ್ವವಿವರದ ಮಾಹಿತಿ ಭರ್ತಿ ಮಾಡಿ ಸೆ. 19ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08022211730, 29601730, 22106460 ಗೆ, ಅಂತರ್ಜಾಲ: http://sahithyaacdemy.karnataka.gov.in ಅಥವಾ ಇ-ಮೇಲ್: sahitya.academy.@gmail.com ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.