Slide
Slide
Slide
previous arrow
next arrow

ಪ್ರತಿಭಾ ಕಾರಂಜಿ; 31ಸ್ಪರ್ಧೆಗಳಲ್ಲಿ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಬಹುಮಾನ

300x250 AD

ಕುಮಟಾ: ಇತ್ತೀಚೆಗೆ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 33ಸ್ಪರ್ಧೆಗಳಲ್ಲಿ ಭಾಗವಹಿಸಿ 31ರಲ್ಲಿ ಬಹುಮಾನ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಅದರಲ್ಲಿ 22ಪ್ರಥಮ, 6 ದ್ವಿತೀಯ, ಮೂವರು ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಕಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠ ಆರವ ಅಂಬಿಗ, ಹಿಂದಿ ಕಂಠಪಾಠ ಓಂಕಾರ ಭಾಗ್ವತ್, ಸಂಸ್ಕ್ರತ ಕಂಠಪಾಠ ಹರ್ಷ ಚಿತ್ರಗಿಮಠ, ಉರ್ದು ಕಂಠಪಾಠ ಧ್ರುವ ಗೋಯಲ್, ಕೊಂಕಣಿ ಕಂಠಪಾಠ ಮಹಾಲಸಾ ಡಿ.ಪೈ, ಸಂಸ್ಕೃ್ರತ ಧಾರ್ಮಿಕ ಪಠಣ ಕೀರ್ತಿ ಭಟ್, ಲಘು ಸಂಗೀತ ಪುರಬ ನಾಯ್ಕ, ಚಿತ್ರಕಲೆ ರಿತ್ವಿಕಾ ಪಟಗಾರ, ಅಭಿನಯ ಗೀತೆ ಹರ್ಷಿಕಾ ಮಡಿವಾಳ, ಕ್ಲೇ ಮಾಡಲಿಂಗ್ ಹರ್ಷಿತ ಗಾವಡಿ, ಭಕ್ತಿಗೀತೆ ಧನುಷ ಗೌಡ, ಆಶುಭಾಷಣ ಓಂಕಾರ ಭಾಗ್ವತ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಕಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ ತನ್ಮಯ ಪಟಗಾರ, ಕಥೆ ಹೇಳುವುದು ಹರ್ಷಿಕಾ ಮಡಿವಾಳ ದ್ವಿತೀಯ ಸ್ಥಾನ ಹಾಗೂ ಛದ್ಮವೇಷ ಸಮೃದ್ಧಿ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ. ಹಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ ಅನನ್ಯಾ ಭಟ್ಟ, ಹಿಂದಿ ಪಲ್ಲವಿ ಶಾನಭಾಗ, ಸಂಸ್ಕೃತ ಹಿಮಜಾ ಭಟ್ಟ, ಮರಾಠಿ ಕೃಪಾ ನಾಯ್ಕ, ಉರ್ದು ವರ್ಷಾ ಚಿತ್ರಗಿ, ಕೊಂಕಣಿ ಪನ್ನಗ ಶಾನಭಾಗ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಹಿಮಜಾ ಭಟ್ಟ, ಲಘು ಸಂಗೀತದಲ್ಲಿ ಮನೋಜ ಭಟ್ಟ, ಭಕ್ತಿಗೀತೆಯಲ್ಲಿ ಶ್ರೀಷ ಎಸ್., ಆಶುಭಾಷಣದಲ್ಲಿ ಶ್ರೇಯಾ ಹೆಗಡೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠದಲ್ಲಿ ಅನನ್ಯಾ ಭಟ್ಟ, ಅಭಿನಯ ಗೀತೆಯಲ್ಲಿ ವೈಷ್ಣವಿ ಕಾಮತ, ಹಾಸ್ಯದಲ್ಲಿ ರೋಹನ ಬಾಳೇರಿ, ಭಾಷಣದಲ್ಲಿ ಶ್ರೇಯಾ ಹೆಗಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಥೆ ಹೇಳುವುದರಲ್ಲಿ ತನಿಷ್ಕಾ ಗುರವ, ಚಿತ್ರಕಲೆಯಲ್ಲಿ ಕಿಶನ ಪ್ರಭು ತೃತೀಯ ಸ್ಥಾನ ಪಡೆದಿದ್ದಾರೆ.
ಇವರ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ, ಶೈಕ್ಷಣಿಕ ಮಾರ್ಗದರ್ಶಕ ಬಿ.ಎಸ್.ಗೌಡ, ಸಲಹೆಗಾರ ಆರ್.ಎಚ್ ದೇಶಭಂಡಾರಿ ಹಾಗೂ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿಶ್ವಸ್ಥರು ಅಭಿನಂದನೆ ಸಲ್ಲಿಸಿ, ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top