Slide
Slide
Slide
previous arrow
next arrow

ರಂಗೋಲಿ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ

300x250 AD

ಅಂಕೋಲಾ: ಪಟ್ಟಣದ ನಾಮಧಾರಿ ಗಣೇಶೋತ್ಸವ ಸಮಿತಿಯವರು ೨೪ನೇ ಗಣೇಶೋತ್ಸವ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ರಂಗೋಲಿ ಸ್ಪರ್ಧೆ ಆಯೋಜಿಸಿದ್ದರು. ೧ರಿಂದ ೭ನೇ ತರಗತಿಯ ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ಸ್ವಾತಿ ನಾಯ್ಕ ಪ್ರಥಮ, ಆರ್ಯ ಶೆಟ್ಟಿ ದ್ವಿತೀಯ, ವೈಷ್ಣವಿ ಭಂಡಾರಿ ತೃತೀಯ ಹಾಗೂ ಅನನ್ಯ ನಾಯ್ಕ, ಯಶಸ್ವಿನಿ ನಾಯ್ಕ ಸಮಾಧಾನಕರ ಬಹುಮಾನ ಪಡೆದುಕೊಂಡರು.
೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರೀತಿ ಕೋಟಾರಕರ ಪ್ರಥಮ, ಅಮೃತ ಪಾಲನಕರ ದ್ವಿತೀಯ, ಪ್ರತೀಕ್ಷಾ ಗೌಡ ತೃತೀಯ ಹಾಗೂ ಕೋಮಲ ಖಾರ್ವಿ, ಸುಶಾಂತ ಆಗೇರ ಸಮಾಧಾನಕರ ಬಹುಮಾನ ಪಡೆದುಕೊಂಡರು.

ವಿಜೇತರಿಗೆ ನಗದು ಹಾಗೂ ಪ್ರಮಾಣಪತ್ರವನ್ನು ವಿತರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಪ್ರಮಾಣ ಪತ್ರ ನೀಡಲಾಯಿತು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ಎಸ್.ನಾಯ್ಕ, ಕಾರ್ಯದರ್ಶಿ ಮೋಹನ ಎಚ್.ನಾಯ್ಕ, ಪ್ರಮುಖರಾದ ಲೀಲಾವತಿ ನಾಯ್ಕ, ರಾಜೇಶ ನಾಯ್ಕ, ಉಮೇಶ ನಾಯ್ಕ, ನಾಗೇಶ ನಾಯ್ಕ, ಶಿವಾನಂದ ನಾಯ್ಕ ಸೇರಿದಂತೆ ಇತರರಿದ್ದರು. ಚಿತ್ರಕಲಾ ಶಿಕ್ಷಕರಾದ ಪ್ರಶಾಂತ ನಾಯ್ಕ, ರಾಘವೇಂದ್ರ ಮಹಾಲೆ ನಿರ್ಣಾಯಕರಾಗಿದ್ದರು.

300x250 AD
Share This
300x250 AD
300x250 AD
300x250 AD
Back to top