• Slide
    Slide
    Slide
    previous arrow
    next arrow
  • ಕ್ಲಾಪ್ಸ್: ‘ಪರಿಪೂರ್ಣ’ ಗೊಬ್ಬರ ಉತ್ಪಾದನಾ ಘಟಕ ಉದ್ಘಾಟನೆ

    300x250 AD

    ಶಿರಸಿ: ತಾಲೂಕಿನ ಕಾಗೇರಿಯಲ್ಲಿ ಕ್ಲಾಪ್ಸ್ ರೈತ ಉತ್ಪಾದಕ ಕಂಪನಿಯ ಸಾವಯವ ಗೊಬ್ಬರ ‘ಪರಿಪೂರ್ಣ’ ಇದರ ಉತ್ಪಾದನಾ
    ಘಟಕವನ್ನು ಸೆ.8 ರಂದು ಉದ್ಘಾಟಿಸಲಾಯಿತು.
    ಈ ಸಮಯದಲ್ಲಿ ಸಹಾಯಕ ತೋಟಗಾರಿಕಾ ನಿರ್ದೇಶಕ ಗಣೇಶ ಹೆಗಡೆ ಮತ್ತು ಸ್ಕೋಡ್‌ವೆಸ್ ಸಂಸ್ಥೆಯ ಪರೆಶ್ ಹೆಗಡೆ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರುಗಳಾದ ಪರಮೇಶ್ವರ ಹೆಗಡೆ, ಗಣೇಶ್ ಹೆಗಡೆ, ಎಂ.ಸಿ ಹೆಗೆಡೆ, ರಾಜಶೇಖರ್ ಜೋಶಿ, ಕೇಶವ್ ಹೆಗಡೆ, ರವೀಶ್ ಹೆಗಡೆ ಮತ್ತು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಪ್ರಸನ್ನ ಪೂಜಾರಿ ಹಾಜರಿದ್ದರು.
    ಕಾರ್ಯಕ್ರಮವು ಪ್ರಸನ್ನ ಪೂಜಾರಿಯವರ ಸ್ವಾಗತದೊಂದಿಗೆ ಪ್ರಾರಂಭವಾಯಿತು.ತೋಟಗಾರಿಕಾ ಇಲಾಖೆಯ ಗಣೇಶ್ ಹೆಗಡೆ ಮಾತನಾಡಿ ಕೃಷಿಯಲ್ಲಿ ಸಾವಯವ ಗೊಬ್ಬರದ ಮಹತ್ವ ಮತ್ತು ಬಳಕೆ ಬಗ್ಗೆ ತಿಳಿಸಿದರು. ನಂತರ ಸ್ಕೋಡ್‌ವೆಸ್ ಸಂಸ್ಥೆಯ ಪರೆಶ್ ಹೆಗಡೆ ಮಾತನಾಡಿದರು.
    ಕಂಪನಿ ನಿರ್ದೇಶಕರಾದ ಪರಮೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕ್ಲಾಪ್ಸ್ ಕಂಪನಿಯ ಕಾರ್ಯವ್ಯಾಪ್ತಿ, ಪ್ರಸ್ತುತದಲ್ಲಿ ಕಂಪನಿಯ ಮಹತ್ವ ಮತ್ತು ರೈತರಿಗೆ ರಾಸಾಯನಿಕ ಗೊಬ್ಬರದ ದುಶ್ಪರಿಣಾಮ ಮತ್ತು ಸಾವಯವ ಗೊಬ್ಬರದ ಉಪಯೋಗದ ಕುರಿತು ತಿಳಿಸಿದರು.
    ನಿರ್ದೇಶಕರಾದ ಗಣೇಶ್ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿ ಎಲ್ಲರಿಗೂ ಶುಭಕೋರಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top