Slide
Slide
Slide
previous arrow
next arrow

ಮರ ಬಿದ್ದು ಸಂಪೂರ್ಣ ಮನೆ ಜಖಂ: ಪರಿಹಾರ ಆದೇಶ ಪತ್ರ ವಿತರಣೆ

300x250 AD

ಶಿರಸಿ :  ಕಳೆದ ವಾರ ಅತಿವೃಷ್ಟಿ ಹಾನಿಯಿಂದಾಗಿ ಮರ ಬಿದ್ದು ಮನೆ ಸಂಪೂರ್ಣ ನಾಶವಾಗಿದ್ದ ತಾಲೂಕಿನ ಹಳ್ಳಿಕಾನಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ, ಮನೆ ಮಾಲೀಕರಿಗೆ ಪರಿಹಾರ ಮೊತ್ತದ ಆದೇಶ ಪತ್ರ ವಿತರಿಸಿದರು. 

ಹಳ್ಳಿಕಾನ ವಾಸು ನಾಯ್ಕ ಎಂಬುವರ ಮನೆಯ ಮೇಲೆ ಬೃಹತ್ ಮರ ಮುರಿದು ಬಿದ್ದು ಮನೆ ಸಂಪೂರ್ಣ ನಾಶವಾಗಿತ್ತು. ಅಲ್ಲದೇ ಘಟನೆಯಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಆದರೆ ಆ ಸಂದರ್ಭದಲ್ಲಿ ಊರಿನಲ್ಲಿ ಇರದ ಕಾರಣ ಕಾಗೇರಿ ಅವರು ಗುರವಾರ ಅವರ ಮನೆಗೆ ಭೇಟಿ ನೀಡಿ 95100 ರೂ. ಮೊತ್ತದ ತುರ್ತು ಪರಿಹಾರ ವಿತರಿಸಿದರು. 

ನಂತರ ಮಾತನಾಡಿದ ಅವರು, ಈಗ ಮೊದಲನೇ ಕಂತಿನ ಪರಿಹಾರವಾಗಿ 95 ಸಾವಿರ ರೂ. ನೀಡಲಾಗಿದೆ. ಒಟ್ಟೂ 5 ಲಕ್ಷ ರೂ‌ ಪರಿಹಾರ ಬರಲಿದೆ. ಮನೆ ಕಟ್ಟುತ್ತಾ ಹೋದಾಗ ಹಂತ ಹಂತವಾಗಿ ಪರಿಹಾರ ಬಿಡುಗಡೆಯಾಗುತ್ತದೆ. ಸರ್ಕಾರ ಹಾನಿಗೀಡಾದ ಸಂತ್ರಸ್ತರಿಗೆ ತುರ್ತು ಸ್ಪಂದನೆ ಮಾಡುತ್ತಿದೆ ಎಂದರು. 

300x250 AD

ಈ ಸಂದರ್ಭದಲ್ಲಿ ಕುಳವೆ ಗ್ರಾಪಂ ಅಧ್ಯಕ್ಷ ವಿನಯ ಭಟ್, ಆ ಭಾಗದ ವಾರ್ಡಿನ ಸದಸ್ಯ ಸಂದೇಶ ಭಟ್ ಬೆಳಖಂಡ, ತಹಶೀಲ್ದಾರ ಶ್ರೀಧರ ಮುಂದಲಮನಿ, ಪ್ರಮುಖರಾದ ಪ್ರಸನ್ನ ಜೋಶಿ, ಶ್ರೀನಾಥ ಶೆಟ್ಟಿ, ರವಿತೇಜ ರೆಡ್ಡಿ, ಮಂಜುನಾಥ ಶೇಟ್, ವಿಶ್ವ ಅರಸಿಕೇರಿ, ಎನ್.ವಿ‌.ಹೆಗಡೆ, ಪಿಡಿಒ ಸರೋಜಾ ನಾಯಕ ಹಾಗೂ ಗ್ರಾಮಸ್ಥರು ಇದ್ದರು. 

Share This
300x250 AD
300x250 AD
300x250 AD
Back to top