• Slide
    Slide
    Slide
    previous arrow
    next arrow
  • ಶಿಕ್ಷಕ, ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಸದೃಢ:ಖಾದರ್

    300x250 AD

    ಭಟ್ಕಳ: ಎಂ.ಪಿ., ಎಂ.ಎಲ್.ಎ., ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳು ಬಲಿಷ್ಠಗೊಂಡರೆ ದೇಶ ಬಲಿಷ್ಠವಾಗದು. ಬದಲಾಗಿ ವರ್ಗದ ಕೋಣೆಯಲ್ಲಿ ಶಿಕ್ಷಣ ಕಲಿಯುವ, ಆಟದ ಮೈದಾನದಲ್ಲಿ ಆಟವಾಡುವ ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗಬಲ್ಲದು ಎಂದು ಮಾಜಿ ಸಚಿವ ಹಾಗೂ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.
    ಅವರು ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್ ಕರ್ನಾಟಕ ಆಯೋಜಿಸಿದ್ದ ರಾಜ್ಯಮಟ್ಟದ ಆನ್ಲೈನ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಸಮಾಜವನ್ನು ನಿರ್ಮಿಸುತ್ತಿರುವ ದೇಶದ ದೊಡ್ಡ ಶಕ್ತಿಯಾಗಿದ್ದಾರೆ. ಇಂದು ನಾನು ಈ ಸ್ಥಾನಕ್ಕೇರಲು ನನ್ನ ಪಾಲಕ ಪೋಷಕರಷ್ಟೇ ಶಿಕ್ಷಕರೂ ಕೂಡ ಕಾರಣರಾಗಿದ್ದಾರೆ. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಅಂದು ನನ್ನ ಶಿಕ್ಷಕರು ನನಗೆ ನೀಡಿದ ಪ್ರೋತ್ಸಾಹ, ಮಾರ್ಗದರ್ಶನವನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಭವಿಷ್ಯದಲ್ಲಿ ಎಲ್ಲರೂ ಅತ್ಯುತ್ತಮ ಶಿಕ್ಷಕರಾಗಿ ರೂಪುಗೊಳ್ಳಬೇಕು., ನಿಮ್ಮ ನಿಮ್ಮ ವಿದ್ಯಾರ್ಥಿ ವರ್ಗವನ್ನು ಅತ್ಯಂತ ಪ್ರೀತಿ ಮತ್ತು ಕರುಣೆಯಿಂದ ಅವರನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡುತ್ತೀರೆಂಬ ವಿಶ್ವಾಸ ನನಗಿದೆ ಎಂದರು.
    ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ನಮ್ಮ ದೇಶ 75ನೆ ಸ್ವಾತಂತ್ರ್ಯ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶದ ಸ್ಥಿತಿಗತಿಯೊನ್ನೊಮ್ಮೆ ಅವಲೋಕ ಮಾಡಿಕೊಂಡರೆ ತುಂಬ ನೋವಾಗುತ್ತದೆ. ಅರ್ಥಶಾಸ್ತ್ರದ ತಳಹದಿಯಲ್ಲಿ ಬಂದಂತಹ ನನಗೆ ಇಲ್ಲಿನ ಬಡತನ, ಹಸಿವು, ನಿರೋದ್ಯೋಗ, ಅನಕ್ಷರತೆ, ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಆರ್ಥಿಕ ದೌರ್ಬಲ್ಯತೆ ಇಂತಹ ಹಲವು ಸಮಸ್ಯೆಗಳ ನಡುವೆ ನಾವು ಯಾವ ರೀತಿಯ ಭಾರತ ದೇಶ ಕಟ್ಟಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಪ್ರಧಾನಿಯವರು 5ಟ್ರೇಲಿಯನ್ ಡಾಲರ್ ಆರ್ಥಿಕತೆ ಮಾಡಬೇಕು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಮಾಡಬೇಕಾದರೆ ನಮ್ಮ ಉನ್ನತ ಶಿಕ್ಷಣ ತುಂಬಾ ಗಟ್ಟಿಯಾಗಬೇಕಾಗಿರುತ್ತದೆ ಎಂಬ ಪ್ರಶ್ನೆ ಉಂಟಾಗುತ್ತದೆ. 75 ವರ್ಷ ಕಳೆದರೂ ನಾವು ಹೊಸ ಹೊಸ ಅವಿಷ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಸವಾಲುಗಳನ್ನು ಎದರಿಸಲು ಸಾಧ್ಯವಾಗುತ್ತಿಲ್ಲ ಎಂದರು. ಶಿಕ್ಷಣವೇ ಶಕ್ತಿ, ಶಿಕ್ಷಣವೇ ಸಾಮ್ರಾಜ್ಯ ಎಂದು ಹೇಳಿಕೊಳ್ಳಬೇಕಾದರೆ ಶಿಕ್ಷಣದ ಮೂಲಕ ಒಂದು ಗಟ್ಟಿಯಾದ ಸಮಾಜ ನಿರ್ಮಾಣ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ ಎಂದರು.
    ಐಟಾ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜ್ಯಕಾರ್ಯದರ್ಶಿ ಯಾಸೀನ್ ಭೀಕ್ಬಾ ಧನ್ಯವಾದ ಅರ್ಪಿಸಿದರು. ವಿಭಾಗೀಯ ಕಾರ್ಯದರ್ಶಿ ಸಲೀಮ್ ಪಾಶ ರಾಯಚೂರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್ ಶಿಕ್ಷಣ ನೀತಿ, ಶೈಕ್ಷಣಿಕ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top