• Slide
  Slide
  Slide
  previous arrow
  next arrow
 • ಅನಾಥ ಶವದ ಅಂತ್ಯಕ್ರಿಯೆ ನಡೆಸಿದ ಪ.ಪಂ ಸದಸ್ಯ

  300x250 AD

  ಯಲ್ಲಾಪುರ: ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟ ಅನಾಥ ವ್ಯಕ್ತಿಯೊಬ್ಬನ ಶವವನ್ನು ಪಟ್ಟಣ ಪಂಚಾಯಿತಿ ರವೀಂದ್ರನಗರ ವಾರ್ಡ್ ಸದಸ್ಯ ಸೋಮೇಶ್ವರ ನಾಯ್ಕ ಹಾಗೂ ಇನ್ನಿತರರು ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಅಂತ್ಯ ಸಂಸ್ಕಾರ ಮಾಡಿದ್ದಾರೆ.
  ಸುಮಾರು 65 ವರ್ಷದ ಗುರು ರೇವಣಕರ್ ಎನ್ನುವ ಅನಾಥ ವೃದ್ಧ ಕಳೆದ 20 ವರ್ಷದಿಂದ ಯಲ್ಲಾಪುರದಲ್ಲಿ ವಾಸಿಸುತ್ತಿದ್ದ. ಈತನಿಗೆ ಸಂಬAಧಿಕರು ಎನ್ನುವವರು ಯಾರು ಇಲ್ಲದಿರುವ ಕಾರಣಕ್ಕೆ ಅಲ್ಲಿ ಇಲ್ಲಿ ಸುತ್ತುತ್ತಿದ್ದ. ನಾಲ್ಕೈದು ದಿನಗಳ ಹಿಂದೆ ಜೋಡುಕೆರೆ ಮಾರುತಿ ದೇವಸ್ಥಾನದ ಬಳಿ ತೀವ್ರ ಅನಾರೋಗ್ಯದಿಂದಾಗಿ ಬಿದ್ದುಕೊಂಡಿದ್ದ ಗುರು ರೇವಣಕರನನ್ನು ಪೊಲಿಸರು ಹಾಗೂ ಸಾರ್ವಜನಿಕರು ತಾಲೂಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸಿದೆ ಮಂಗಳವಾರ ಬೆಳಿಗ್ಗೆ ಆತ ಮೃತಪಟ್ಟಿದ್ದಾನೆ.
  ವಿಷಯ ತಿಳಿದ ಸೋಮೇಶ್ವರ ನಾಯ್ಕ ಕೂಡಲೇ ಮೃತನ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿ, ರವೀಂದ್ರನಗರ ನಿವಾಸಿಗಳಾದ ಜಗದೀಶ ನಾಯ್ಕ, ಸಂತೋಷ ಬೋವಿ, ಸುರೇಶ ಶೆಟ್ಟಿ, ಬಾಲ ಪಿಳ್ಳೆ, ಸೋಮು ನೆಲೋಡಿ ಹಾಗೂ ಬಾಬಾ ಅವರ ಸಹಕಾರ ಪಡೆದು ಮೃತನಾದ ಅಂತ್ಯಸAಸ್ಕಾರವನ್ನು ಶಾಸ್ತ್ರೋತ್ರವಾಗಿ ನೆರವೇರಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top